ಹಸನ್ಮುಖಿ ಶಿಕ್ಷಕಿ ಕೊರೋನಾಗೆ ಬಲಿ- ತತ್ತರಿಸುತ್ತಿರುವ ಶಿಕ್ಷಕ ಸಮೂಹ
1 min readಬೆಂಗಳೂರು: ವಿದ್ಯಾಗಮ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಅನಾರೋಗ್ಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹಸನ್ಮುಖಿ ಶಿಕ್ಷಕಿಯೋರ್ವರು ಸಾವಿಗೀಡಾದ ಪ್ರಕರಣ ನಡೆದಿದೆ.
ಬೆಂಗಳೂರಿನ ಭುವನೇಶ್ವರಿನಗರದ ಶ್ರೀ ಕಡಪಸ್ವಾಮಿ ಮಠ ಪ್ರದೇಶದಲ್ಲಿದ್ದ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ವಸಂತ ಕೊರೋನಾದಿಂದ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ, ನಿರಂತರ ಜ್ವರದಿಂದ ಬಳಲುತ್ತಿದ್ದ ಶಿಕ್ಷಕಿ ವಸಂತ ಕೋವಿಡ್-19 ಚಿಕಿತ್ಸೆಗೆ ಒಳಗಾದಾಗ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ವಿದ್ಯಾಗಮ ಕಾರ್ಯಕ್ರಮ ತಾತ್ಕಾಲಿಕವಾಗಿ ರದ್ದುಗೊಂಡಿದ್ದರೂ ಶಿಕ್ಷಕರ ಸಾವುಗಳು ನಿಲ್ಲದೇ ಇರುವುದು ತೀವ್ರ ಆತಂಕಕ್ಕೀಡು ಮಾಡಿದೆ. ಶಿಕ್ಷಕರ ವಲಯದಲ್ಲಿ ತಮ್ಮನ್ನೂ ಕೊರೋನಾ ವಾರಿಯರ್ ಎಂದು ಸರಕಾರ ಗುರುತಿಸಬೇಕೆಂಬ ಒತ್ತಾಯಗಳು ಕೇಳಿಬರತೊಡಗಿವೆ.