Posts Slider

Karnataka Voice

Latest Kannada News

ಮೋದಿ ಮನಸ್ಸಲ್ಲೇ ಬಂದಿದೆ-ಸಿಎಂ ಬದಲಾವಣೆ ಸತ್ಯ- ಬಸನಗೌಡ ಪಾಟೀಲ ಯತ್ನಾಳ

1 min read
Spread the love

ವಿಜಯಪುರ: ಭಾರತೀಯ ಜನತಾ ಪಕ್ಷದಲ್ಲಿ ಹೆಚ್ಚಿಗೆ ಶಾಸಕರು ಇರುವುದು ಉತ್ತರ ಕರ್ನಾಟಕದಲ್ಲಿ ಮಾತ್ರ. ಮಂಡ್ಯ, ಚಾಮರಾಜನಗರ, ಹಾಸನದಲ್ಲಿ ಯಾರೂ ಬಿಜೆಪಿಗೆ ಓಟ್ ಆಗ್ತಾರೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ನಗರದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಯದಲ್ಲಿ ಮಾತನಾಡಿರುವ ಯತ್ನಾಳ, ನಾವೂ ಈಗ ಅವರ ಮನೆಯ ಮುಂದೆ ಹೋಗಿ ನಿಲ್ಲುತ್ತೇವೆ. ಅವರು ನಮ್ಮ ಮನೆಯ ಮುಂದೆ ಬಂದು ನಿಲ್ಲುವ ಹಾಗೇ ಮಾಡುವ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಈ ಬಾರಿ ಉತ್ತರ ಕರ್ನಾಟಕದವರನ್ನೇ ಮುಖ್ಯಮಂತ್ರಿ ಮಾಡುತ್ತೇನೆಂದು. ಇದಕ್ಕೆ ಕಾರಣ ಉತ್ತರ ಕರ್ನಾಟಕವೇ. ಯಾಕಂದ್ರೇ, ಈ ಭಾಗದಲ್ಲಿ 95 ರಿಂದ 100 ಶಾಸಕರು ಹೋಗುತ್ತಾರೆ. ಆ ಭಾಗದಲ್ಲಿರೋ 10-15 ಜನರನ್ನ ತೆಗೆದುಕೊಂಡು ಇವರು ಆಡಳಿತ ನಡೆಸುತ್ತಾರೆ ಎಂದು ಲೇವಡಿ ಮಾಡಿದ್ರು.

ಇನ್ನೂಮುಂದೆ ಹೀಗೆ ಆಗಲ್ಲ. ಉತ್ತರ ಕರ್ನಾಟಕದವರಿಗೆ ಸಿಎಂ ಹುದ್ದೆ ಸಿಗಲಿದೆ. ಇದರಿಂದ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎನ್ನುವ ಮೂಲಕ ಸಿಎಂ ಯಡಿಯೂರಪ್ಪ ವಿರುದ್ಧ ನಡೆದಿರುವ ಬದಲಾವಣೆ ವಿಷಯಕ್ಕೆ ಮತ್ತಷ್ಟು ಕಾವೇರಿದಂತಾಗಿದೆ.

ಉಪಚುನಾವಣೆಗಳು ನಡೆಯುತ್ತಿದ್ದಾಗಲೇ, ಇಂತಹ ಹೇಳಿಕೆ ಹೊರಗೆ ಬಂದಿರುವುದರಿಂದ ಪಕ್ಷಕ್ಕೆ ಯಾವ ರೀತಿಯ ಪರಿಣಾಮ ಬೀಳಲಿದೆ ಎಂಬುದನ್ನ ಫಲಿತಾಂಶವೇ ಉತ್ತರ ಹೇಳಬೇಕಿದೆ.


Spread the love

Leave a Reply

Your email address will not be published. Required fields are marked *