ಹುಬ್ಬಳ್ಳಿಯಲ್ಲಿ ಹಾಡುಹಗಲೇ ಕೊಲೆ- ಹುಬ್ಬಳ್ಳಿ ದೊಡ್ಡ ಕುಳ ದುರ್ಮರಣ

ಹುಬ್ಬಳ್ಳಿ: ಹಲವು ದಂಧೆಗಳ್ಲಿ ತೊಡಗಿಕೊಂಡಿದ್ದ ರಮೇಶ ಭಾಂಡಗೆಗೆ ಚಾಕು ಇರಿದ ಘಟನೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಗೆ ಆಸ್ತಿ ವಿವಾದವೇ ಕಾರಣವೆಂದು ತಿಳಿದು ಬಂದಿದೆ.
ಕಮರಿಪೇಟೆ ನಿವಾಸಿಯಾಗಿರುವ ರಮೇಶ ಭಾಂಡಗೆಗೆ ಹಲವು ಬಾರಿ ಚಾಕುವಿನಿಂದ ಇರಿಯಲಾಗಿದ್ದು, ತೀವ್ರ ಥರದಿಂದ ಗಾಯಗೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನ ತೆಗೆಯುವಲ್ಲಿ ನಿರತನಾಗಿದ್ದ ರಮೇಶ ಭಾಂಡಗೆ, ಕೆಲವರೊಂದಿಗೆ ದುಷ್ಮನಿ ಬೆಳೆಸಿಕೊಂಡಿದ್ದ.
ತೀವ್ರವಾಗಿ ಗಾಯಗೊಂಡಿರುವ ರಮೇಶನನ್ನ ಚಿಕಿತ್ಸೆಗಾಗಿ ಕಿಮ್ಸಗೆ ತರಲಾಗಿದ್ದು, ತೀವ್ರ ಥರದ ರಕ್ತಸ್ರಾವವಾದ ಪರಿಣಾಮ ಆರೋಗ್ಯ ಗಂಭೀರವಾಗಿದೆ ಎಂದು ಹೇಳಲಾಗಿದೆ. ಹಾಡುಹಗಲೇ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಯಾವ ಕಾರಣಕ್ಕೆ ಹಲ್ಲೆ ನಡೆದಿದೆ ಎಂದು ಗೊತ್ತಾಗಿಲ್ಲ. ಪ್ರಕರಣ ಶಹರ ಠಾಣೆಯಲ್ಲಿ ದಾಖಲಾಗಲಿದೆ. ಹಲವು ವಿವಾದಗಳನ್ನ ಮೈಮೇಲೆ ಎಳೆದುಕೊಂಡಿದ್ದ ರಮೇಶ ಭಾಂಡಗೆ ಈ ಹಿಂದೆ ರೌಡಿ ಷೀಟರ್ ಕೂಡಾ ಆಗಿದ್ದರು.