ರಾಜ್ಯದಲ್ಲಿ ಮತ್ತೊಂದು ಬೆತ್ತಲೆ ಸಿಡಿ ಪ್ರಕರಣ….!
1 min readಕಲಬುರಗಿ: ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯನ್ನ ಖಾಯಂಗೊಳಿಸಲು ಮರಳು ಮಾಡಿ, ಆಕೆಯ ಬೆತ್ತಲಾಗುವ ವೀಡಿಯೋ ಮಾಡಿಸಿಕೊಂಡು, ವೈರಲ್ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ.
ವೈರಲ್ ವೀಡಿಯೋ…
ಕಲಬುರಗಿ ವಿಶ್ವವಿದ್ಯಾನಿಲಯದ ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕುಂಡಿ ಎಂಬಾತನೇ ಆಮಿಷವೊಡ್ಡಿ ಮೋಸ ಮಾಡಿದ್ದಾರೆಂದು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಗ್ರಂಥಾಲಯ ಅಧೀಕ್ಷಕ ಶರಣಪ್ಪ ಮಾಕುಂಡಿ ವಿರುದ್ಧ 292, 407, 420, 354(A) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಗೆ ಬೆತ್ತಲಾಗಿ ವಿಡಿಯೋ ಮಾಡಿ ಹಾಕಿದ್ರೆ ಪರ್ಮಿನೆಂಟ್ ಜಾಬ್ ಕೊಡಿಸ್ತೀನಿ ಅಂತ ಹೇಳಿದ ವಿವಿ ಗ್ರಂಥಾಲಯ ಅಧಿಕ್ಷಕ ಶರಣಪ್ಪ ಮಾಕುಂಡಿ. ಬೆತ್ತಲೆ ವಿಡಿಯೋ ಶೂಟ್ ಮಾಡಿ ಮೊಬೈಲ್ ಹಾಕಿದ್ರೆ ಪರ್ಮನೆಂಟ್ ಜಾಬ್ ನೀಡುವ ಆಮಿಷ ನೀಡಿದ್ದಾನೆ. ವಿವಿ ಉದ್ಯೋಗಿಯ ಮಾತಿಗೆ ಮರುಳಾಗಿ ತನ್ನದೇ ಬೆತ್ತಲೆ ವಿಡಿಯೋ ಶೂಟ್ ಮಾಡಿ ಮಹಿಳೆ ಆತನಿಗೆ ಹಾಕಿದ್ದಾಳೆ. ವೀಡಿಯೋ ನೋಡಿ ಸುಮ್ಮನಾಗುವ ಬದಲು ಅದನ್ನು ಬೇರೆ ಗ್ರೂಪಗೆ ಶೇರ್ ಮಾಡಿದ್ದಾನೆ. ಈಗ ವೀಡಿಯೊ ವಿವಿ ಯ ಎಲ್ಲಾ ಗ್ರೂಪ್ ನಲ್ಲಿ ಹರಿದಾಡ್ತಿರೊದು ಗಮನಕ್ಕೆ ಬಂದ ಕೂಡ್ಲೇ ಮಹಿಳೆ ನಂಬಿಸಿ ಮೋಸ ಮಾಡಿದ್ದಾನೆ ಅಂತ ವಿವಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 292, 407, 420, 354 (ಎ) ಅಡಿ ಶರಣಪ್ಪ ಮಾಕುಂಡಿ ವಿರುದ್ಧ ದೂರು ದಾಖಲಾಗಿದೆ.