“BRTS ತೊಲಗಿಸಲು” ಹೋರಾಡುತ್ತಿದ್ದ “ಧಾರವಾಡ ಧ್ವನಿ ಬಂಧಿಸಿದ” ಪೊಲೀಸರು….!!!

ಧಾರವಾಡ: ಬಿಆರ್ಟಿಎಸ್ (Bus Rapid Transit System) ಮಾರ್ಗದಿಂದ ಆಗುತ್ತಿರುವ ತೊಂದರೆ ನಿವಾರಿಸಲು ಆಗದ ಹಿನ್ನೆಲೆಯಲ್ಲಿ ಧಾರವಾಡ ಧ್ವನಿ ಸಂಘಟನೆ ಹೋರಾಟ ನಡೆಸಿದ ಸಮಯದಲ್ಲಿ ಹಲವರನ್ನು ಪೊಲೀಸರು ಬಂಧಿಸಿದ ಘಟನೆ ನಡೆಯಿತು.
ಹುಬ್ಬಳ್ಳಿ ಧಾರವಾಡ ನಗರದ ಮಧ್ಯದಲ್ಲಿ ಜನರು ಸಂಚಾರ ಮಾಡುವುದಕ್ಕೆ ಪರಿತಪಿಸುತ್ತಿದ್ದಾರೆಂದು ದೂರಿದ ಧ್ವನಿಯ ಪ್ರಮುಖರು, ಬಿಆರ್ಟಿಎಸ್ ಮಾರ್ಗದಲ್ಲಿ ಖಾಸಗಿ ವಾಹನ ಸಂಚಾರಕ್ಕೆ ಮುಂದಾಗಿದ್ದರು. ಆಗ ಪೊಲೀಸರು ಬಂಧಿಸಿದರು.
ವೀಡಿಯೋ…
ಧ್ವನಿ ಸಂಘಟನೆಯ ಈಶ್ವರ ಶಿವಳ್ಳಿ, ಮಂಜು ನಡಟ್ಟಿ, ಮನೋಜ ಕರ್ಜಗಿ, ಶಂಭು ಸಾಲಿಮನಿ, ಬಸವರಾಜ ಜಾಧವ, ಪರಮೇಶ್ವರ ಕಾಳೆ, ಸಂತೋಷ ಪಟ್ಟಣಶೆಟ್ಟಿ, ವೆಂಕಟೇಶ ರಾಯ್ಕರ, ತುಳಜಪ್ಪ ಪೂಜಾರ, ಪುಂಡಲೀಕ ತಳವಾರ, ಮಂಜು ನೀರಲಕಟ್ಟಿ, ಪಮ್ಮೋಜಿ, ರಾಜೇಶ, ಬನ್ನೂರ ಸೇರಿದಂತೆ ಹಲವರು ಹೋರಾಟ ನಡೆಸಿ, ಬಂಧನಕ್ಕೊಳಗಾದರು.