‘ಸಾವುಕಾರ ಜೊತೆಗೆ ಜೋಡೆತ್ತುಗಳು’- ಹುಬ್ಬಳ್ಳಿ ರಾಮನಗರದಲ್ಲಿ ಮಾಡಿದ್ದೇನು..?
1 min readಬಿಜೆಪಿಯಲ್ಲಿ ಜೋಡೆತ್ತುಗಳೆಂದು ಗುರುತಿಸಿಕೊಂಡಿರುವ ಸಂತೋಷ ಚವ್ಹಾಣ ಮತ್ತು ಮಹೇಂದ್ರ ಕೌತಾಳ ವಿಧಾನಪರಿಷತ್ ಚುನಾವಣೆ ಪ್ರಚಾರದ ಸಮಯದಲ್ಲೂ ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುತ್ತಿದ್ದಾರೆ.
ಹುಬ್ಬಳ್ಳಿ: ರಾಮನಗರದ ಪ್ರಮುಖ ರಸ್ತೆ ಹದಗೆಟ್ಟು ಹಲವು ದಿನಗಳಿಂದ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಅನುದಾನವನ್ನ ಬಿಡುಗಡೆ ಮಾಡಿದ್ದು, ಆ ಕಾಮಗಾರಿಗಿಂದು ಭೂಮಿ ಪೂಜೆ ನಡೆಯಿತು.
ಕೊರೋನಾ ಮಹಾಮಾರಿಯ ನಡುವೆಯೂ ಅಭಿವೃದ್ಧಿ ಕಾರ್ಯಗಳನ್ನ ಕೈಬಿಡದಂತೆ ನೋಡಿಕೊಂಡಿರುವ ಸಚಿವ ಜಗದೀಶ ಶೆಟ್ಟರ, ಾಮನಗರದ ಪ್ರವೇಶದ ಪ್ರಮುಖ ರಸ್ತೆಯನ್ನ ಕಾಂಕ್ರೀಟ್ ಮಾಡಿಸುತ್ತಿದ್ದಾರೆ. ಈ ಕಾಮಗಾರಿಯ ಭೂಮಿ ಪೂಜೆಯನ್ನ ಸಾಬೂನು ಮತ್ತು ಮಾರ್ಜಕ ರಾಜ್ಯದ ನಿಗಮ ಮಂಡಳಿ ಸದಸ್ಯ ಮಲ್ಲಿಕಾರ್ಜುನ ಸಾವುಕಾರ ಸರ್ ನೆರವೇರಿಸಿದರು.
ಈ ಸಮಯದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಸಾವುಕಾರ, ಕ್ಷೇತ್ರದ ಅಭಿವೃದ್ಧಿಗಾಗಿ ಜಗದೀಶ ಶೆಟ್ಟರ ಸದಾಕಾಲ ಮುಂದಿರುತ್ತಾರೆ. ಜನಪರ ಕಾರ್ಯಗಳು ಎಲ್ಲ ಸಮಯದಲ್ಲೂ ನಡೆಯುತ್ತವೆ ಎಂದರು ಹೇಳಿದರು. ಕಾರ್ಯಕ್ರಮದಲ್ಲಿದ್ದ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ್ ಚೌವಾಣ್, ಪೂಜೆ ನೆರವೇರಿಸಿ, ಸಚಿವ ಜಗದೀಶ ಶೆಟ್ಟರ ಕಾರ್ಯ ವೈಖರಿಯನ್ನ ಜನರಿಗೆ ತಿಳಿಸಿದರು. ಕೊರೋನಾ ಸಮಯದಲ್ಲಿಯೂ ಅಬಿವೃದ್ಧಿ ಕಾರ್ಯಗಳು ನಿಂತಿಲ್ಲ. ನಿರಂತರವಾಗಿ ಮಳೆ ಬರುತ್ತಿರುವುದರಿಂದ ರಸ್ತೆಯಂತಹ ಕಾಮಗಾರಿಗಳು ವಿಳಂಬವಾಗುತ್ತಿವೆ ಹೊರತು ಬೇರೆ ಕಾರಣಗಳಿಗಲ್ಲ ಎಂದು ಹೇಳಿದರು.
ರಾಜ್ಯ ಎಸ್ಸಿ ಮೋರ್ಚಾದ ಮಹೇಂದ್ರ ಕೌತಾಳ್, ರಾಮು ಯಾದಗಿರಿ, ಸೀಲನ್ ಜೇವಿಯರ್, ಹನುಮಂತ ಚಲವಾದಿ, ರಾಜು ವಂದಾಲ, ಇಬ್ರಾಹಿಂ, ಅನ್ವರ್, ಯಮನಪ್ಪ ಕುದುರಿ, ಸುಖದೇವ್ ಕಾಂಬ್ಳೆ, ಗೌಡರ್, ಫಿಲೋಮಿನಾ ಆರೋಕ್ಯಸ್ವಾಮಿ, ಅನುಸೂಯಾ ಮಡಿವಾಳರ, ಭುವನೇಶ್ವರಿ ಪಿಳ್ಳೆ, ದೇವಿಕಾ ಛಲವಾದಿ, ರೇಖಾ ಬನ್ಸೂಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಮನಗರಕ್ಕೆ ಬರುವ ಪ್ರಮುಖ ರಸ್ತೆಯನ್ನ ಸುಧಾರಣೆ ಮಾಡಿ, ಕಾಮಗಾರಿ ಭೂಮಿ ಪೂಜೆ ಬಂದ ಪ್ರಮುಖರಿಗೆ ಮಹೇಂದ್ರ ಕೌತಾಳ ಅಭಿನಂದನೆ ಸಲ್ಲಿಸಿ, ಸಚಿವ ಜಗದೀಶ ಶೆಟ್ಟರ ಅವರಿಗೆ ಧನ್ಯವಾದ ತಿಳಿಸಿದರು.