ಕಾರಿನ ಹೊಡೆತಕ್ಕೆ ಪಲ್ಟಿಯಾದ ಟ್ರ್ಯಾಕ್ಟರ್: ಇದ್ದವರೆಲ್ಲರೂ ಸೇಫ್
![](https://karnatakavoice.com/wp-content/uploads/2021/02/WhatsApp-Image-2020-12-29-at-6.46.15-PM-1024x768.jpeg)
ಧಾರವಾಡ: ಸವದತ್ತಿ ಕಡೆಯಿಂದ ಧಾರವಾಡದ ಹತ್ತಿ ಜಿನ್ನಿಂಗ್ ಪ್ಯಾಕ್ಟರಿಗೆ ಬರುತ್ತಿದ್ದ ಟ್ಯ್ರಾಕ್ಟರಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾದ ಘಟನೆ ತಾಲೂಕಿನ ಹಾರೋಬೆಳವಡಿ ಬಳಿ ಸಂಭವಿಸಿದ್ದು, ಕಾರಿನಲ್ಲಿದ್ದವರು ಹಾಗೂ ಟ್ರ್ಕಾಕ್ಟರ್ ಚಾಲಕ ಪ್ರಾಣಾಪಯಾದಿಂದ ಪಾರಾಗಿದ್ದಾನೆ.
ಸವದತ್ತಿಯಿಂದ ಹಾವೇರಿಗೆ ಹೊರಟಿದ್ದ ಮುಳಗುಂದ ಅವರಿಗೆ ಸೇರಿದ ಕಾರು, ಹಿಂಬದಿಯಿಂದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಆಗ ಟೇಬಲರ್ ಪಲ್ಟಿಯಾಗಿದ್ದು ತಕ್ಷಣವೇ ಎಂಜಿನ್ ಕೂಡಾ ನೆಲಕ್ಕುಳಿರಳಿದೆ. ಚಾಲಕ ತಕ್ಷಣವೇ ಕೆಳಗೆ ಅಭಿಮುಖವಾಗಿ ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವೇಗವಾಗಿ ಡಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಟ್ರ್ಯಾಕ್ಟರ್ ಕೆಳಗೆ ಬಿದ್ದ ಪರಿಣಾಮ ಡಿಸೇಲ್ ರಸ್ತೆಗುಂಟ ಹರಿಯುತ್ತಿತ್ತು. ಅದೃಷ್ಟವಶಾತ ಬೆಂಕಿ ತಗುಲದ ಪರಿಣಾಮ ಯಾವುದೇ ಅವಘಡ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದರು. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪ್ರಕರಣ ದಾಖಲು ಮಾಡಿದ್ದಾರೆ.