ಹುಬ್ಬಳ್ಳಿಯಲ್ಲಿ ನಿವೃತ್ತ KSLU ಪ್ರಾಂಶುಪಾಲ ಮರ್ಡರ್
1 min readಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಿವೃತ್ತ ಪ್ರಾಂಶುಪಾಲರನ್ನ ಹತೈಗೈದ ಘಟನೆ ಲಿಂಗರಾಜನಗರದ ಕಟ್ಟಿ ಮಂಗಳಮ್ಮ ದೇವಸ್ಥಾನ ಬಳಿಯಿರುವ ನಿವಾಸದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಿವೃತ್ತ ಪ್ರಾಂಶುಪಾಲ ಎಸ್.ಎಸ್.ಮುಶಣ್ಣನವರ ಕೊಲೆಯಾಗಿದ್ದು, ಘಟನೆಗೆ ನಿಜವಾದ ಕಾರಣವೇನು ಎಂದು ತಿಳಿದು ಬಂದಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆದಿದೆ.
ಘಟನೆಯು ಯಾವಾಗ ನಡೆದಿದೆ ಎಂದು ಇನ್ನೂ ತನಿಖೆಯಿಂದ ಗೊತ್ತಾಗಬೇಕಿದೆ. ನಿವೃತ್ತ ಪ್ರಾಂಶುಪಾಲರ ಹತ್ಯೆಯಲ್ಲಿ ಯಾರ ಕೈವಾಡವಿದೆ ಎಂಬುದನ್ನ ತಿಳಿಯಬೇಕಿದೆ. ಡಿಸಿಪಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಶವವನ್ನ ಕಿಮ್ಸಗೆ ರವಾನೆ ಮಾಡಲಾಗಿದೆ.