ಹುಬ್ಬಳ್ಳಿ ಘಂಟಿಕೇರಿ, ಬೆಂಡಿಗೇರಿ: ಧಾರವಾಡದ ಶಹರ ಠಾಣೆ- ಏನೇಲ್ಲಾ ಕ್ರೈಂ ನಡೆದಿವೆ ಗೊತ್ತಾ..?

ಹುಬ್ಬಳ್ಳಿ-ಧಾರವಾಡ: ಹುಬ್ಬಳ್ಳಿಯ ಅಕ್ಕಿಹೊಂಡ ಗಬ್ಬೂರ ಗಲ್ಲಿಯಲ್ಲಿ ನಿಲ್ಲಿಸಿದ್ದ ಡಿಯೋ ದ್ವಿಚಕ್ರವಾಹನವನ್ನ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈಗಾಗಲೇ ಅವಳಿನಗರದಲ್ಲಿ ಹಲವು ಬೈಕ್ ಕಳ್ಳರನ್ನು ಹಿಡಿದಿದ್ದರೂ ಇನ್ನೂ ಬೈಕ್ ಗಳ ಕಳ್ಳತನ ಮಾತ್ರ ನಿಲ್ಲುತ್ತಿಲ್ಲ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಡಿಯೋ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಸೆಟ್ಲಮೆಂಟ್ ಗಂಗಾಧರನಗರ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಸುನೀಲ ಸಾಗರಸಿಂಗ್ ಕಂಜರಬಾಟ ಪೊಲೀಸರ ದಾಳಿಯ ಸಮಯದಲ್ಲಿ ಟೆಟ್ರಾ ಪ್ಯಾಕೇಟುಗಳನ್ನ ಬಿಟ್ಟು ಪರಾರಿಯಾಗಿದ್ದಾನೆ. 3015 ರೂಪಾಯಿ ಮೌಲ್ಯದ 94 ಟೆಟ್ರಾ ಪ್ಯಾಕುಗಳನ್ನ ವಶಕ್ಕೆ ಪಡೆದು ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಬಿಟಿ ಹತ್ತಿರ ಆರೋಪಿ ರಾಜು ನೀಲಪ್ಪಾ ಬಳ್ಳಾರಿ ಹಾಗೂ ವಸಂತ ದುರಗಪ್ಪಾ ಗೊಲ್ಲರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ 30 ಶ್ಯಾಚೇಟ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಪ್ರಕರಣ ನಡೆದಿದ್ದು, ಧಾರವಾಡದ ಜಕಣಿಭಾವಿ ಹತ್ತಿರ ಮಟಕಾ ಆಡುತ್ತಿದ್ದ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ದಿಲಾವರ ಶೇಖ ಹಾಗೂ ರೋಹಿತ ಶಿವಳ್ಳಿ ಎಂಬುವವರನ್ನ ವಶಕ್ಕೆ ಪಡೆದು ಅವರಿಂದ 1580 ರೂಪಾಯಿ ಹಾಗೂ ಓಸಿಗೆ ಬಳಕೆಯಾಗುತ್ತಿದ್ದ ಪರಿಕರಗಳನ್ನ ವಶಕ್ಕೆ ಪಡೆಯಲಾಗಿದೆ.