ಒಂದೇ ಕುಟುಂಬದ ನಾಲ್ವರ ದುರ್ಮರಣ: ಲಕ್ವಾ ಚಿಕಿತ್ಸೆಗೆ ಹೊರಟವರು ಮಸಣಕ್ಕೆ
1 min readಧಾರವಾಡ: ಪಾರ್ಶ್ವವಾಯು ಚಿಕಿತ್ಸೆಗೆ ರಾಯಚೂರು ಜಿಲ್ಲೆಯ ಮಾನ್ವಿಯಿಂದ ಹೊರಟಿದ್ದ ವಾಹನ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವಿಗೀಡಾದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ ಕ್ರಾಸ್ ಬಳಿ ಸಂಭವಿಸಿದೆ.
ಕಾರು ಮತ್ತು ಟ್ರ್ಯಾಕ್ಸ್ ನಡುವೆ ಅಪಘಾತ ಸಂಭವಿಸಿದ್ದು ಮೃತರನ್ನ ಸಂಗಪ್ಪ ಈರಪ್ಪ, ನಾಗಮ್ಮ ಸಂಗಪ್ಪ, ಹನಮಪ್ಪ ದುರ್ಗಪ್ಪ ಭೋವಿ, ಈರಪ್ಪ ಸಂಗಪ್ಪ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಸಣ್ಣೀರಪ್ಪಾ ಮತ್ತು ಲಕ್ಷ್ಮೀ ಗಾಯಗೊಂಡಿದ್ದು ಇಬ್ಬರನ್ನ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ.
ಮಾನ್ವಿಯಿಂದ ರಾತ್ರಿಯ ಉತ್ತರಕನ್ನಡ ಜಿಲ್ಲೆಯ ಹಲಗಾಗೆ ‘ಲಕ್ವಾ’ಗೆ ಚಿಕಿತ್ಸೆ ಪಡೆಯಲು ಹೊರಟಾಗ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ವಾಹನ ಚಲಾವಣೆ ಮಾಡುತ್ತಿದ್ದ ಇದಕ್ಕೆ ಕಾರಣವೆಂದು ಹೇಳಲಾಗಿದ್ದು, ಘಟನೆ ಬಗ್ಗೆ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಘಟನೆಯಲ್ಲಿ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ಕೆಲಕಾಲ ಗದಗ-ಹುಬ್ಬಳ್ಳಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಕೆಲಕಾಲ ನಿಂತು ಸಂಚಾರವನ್ನ ಸರಿಪಡಿಸಿದರು.