ಯುವ ಕಾಂಗ್ರೆಸ್ ಫಲಿತಾಂಶ: ದಿನವೂ ಕಾಯುವುದೇ ಕೆಲಸ..!

ಬೆಂಗಳೂರು: ಕಾಂಗ್ರೆಸ್ ಪಕ್ಷ ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಆ್ಯಪ್ ಮೂಲಕ ಯುವ ಕಾಂಗ್ರೆಸ್ ಚುನಾವಣೆಯನ್ನ ನಡೆಸಿ ಅದಾಗಲೇ 18 ದಿನಗಳು ಕಳೆಯಲು ಬಂದಿವೆ. ಆದರೆ, ಫಲಿತಾಂಶ ಕೊಡಲು ಮಾತ್ರ ಆಗುತ್ತಿಲ್ಲ.
ಹಲವು ವಿದ್ಯಮಾನಗಳ ನಡುವೆ ಕಳೆದ ಆರು ದಿನದಿಂದ ಇವತ್ತು ಸಂಜೆ ಐದು ಗಂಟೆಗೆ ಬರುತ್ತೇ ಎಂದು ಮೊದಲೊಂದು ಮೆಸೇಜ್ ಬರತ್ತೆ. ಸಂಜೆ ಆಗುತ್ತಿದ್ದಂತೆ ಮತ್ತೊಂದು ಮೆಸೇಜ್ ಬರತ್ತೆ, ‘ನಾಳೆ ಸಂಜೆಯೊಳಗೆ ಫಲಿತಾಂಶ ಬರತ್ತೆ’ ಎಂದು ಹೇಳಲಾಗುತ್ತಿದೆ. ಕಳೆದ ಐದಾರೂ ದಿನದಿಂದ ಇದೇ ಕಥೆಯಾಗಿದೆ.
ನಿನ್ನೆ ಸಂಜೆ ಐದು ಗಂಟೆಗೆ ಫಲಿತಾಂಶ ಕೊಡುತ್ತೇವೆ ಎಂದವರು, ಇಂದು ಸಂಜೆ 6 ಗಂಟೆಯೊಳಗೆ ಕೊಡುತ್ತೇವೆ ಎಂದಿದ್ದರು. ಇದೀಗ ಮತ್ತೊಂದು ಮೆಸೇಜ್ ಬಂದಿದೆ. ಅದೀಗ ಈ ಥರಾ ಇದೆ ನೀವೇ ನೋಡಿ. ಯುವ ಕಾಂಗ್ರೆಸ್ ಚುನಾವಣೆಯ ಫಲಿತಾಂಶ ಬಂದಾಗಲೇ ಖರೇ.. ಖರೇ ಎನ್ನುವಂತಾಗಿದೆ. ಉತ್ಸಾಹಿಗಳು ಮಾತ್ರ ಮರುಕಪಡುತ್ತಲೇ ಇದ್ದಾರೆ.
Dear candidates
We are about to resolve the technical issue by evening around 7pm.
There after we would require 1 day to check and release the results.
On 31 jan, we plan to release block results.
On 01 feb, district results,
On 02 feb, state committee and
Later the State President results.
By PRO