Karnataka Voice

Latest Kannada News

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ “ಆಸ್ತಿ” ಹಲವರಿಗೆ ಚಿನ್ನದ ಮೊಟ್ಟೆಯಿಡುವ “ಕೋಳಿ”…

Spread the love

ಹುಬ್ಬಳ್ಳಿ/ಧಾರವಾಡ: ಮಹಾನಗರ ಪಾಲಿಕೆಯು ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದ್ದು, ಹಲವರಿಗೆ ತನ್ನ ಆಸ್ತಿಯನ್ನ ಕೊಟ್ಟು ‘ಚಿನ್ನ’ದ ಮೊಟ್ಟೆ ನೀಡುವ ಕೋಳಿಯನ್ನಾಗಿಸಿದ್ದಾರೆ ಎಂಬುದು ಪ್ರಜ್ಞಾವಂತರ ಅಂಬೋಣವಾಗಿದೆ.

ಹುಬ್ಬಳ್ಳಿ ಧಾರವಾಡದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಾಣಿಜ್ಯ ಸಂಕೀರ್ಣ ಹೊಂದಿರುವ ಮಹಾನಗರ ಪಾಲಿಕೆ ಅವರಿಂದ ಬಿಡಿಗಾಸನ್ನ ಬಾಡಿಗೆ ರೂಪದಲ್ಲಿ ಪಡೆಯುತ್ತಿದ್ದಾರೆ. ಸೋಜಿಗವೆಂದರೇ, ಮೂಲ ಬಾಡಿಗೆ ಪಡೆದವರು ಯಾರೂ ಇಲ್ಲವೇ ಇಲ್ಲಾ, ಕೆಲವೊಂದಿಷ್ಟು ಮಳಿಗೆಗಳನ್ನ ಮಾರಾಟ ಮಾಡುತ್ತಲೇ ನಡೆದಿದ್ದಾರೆ.

ಧಾರವಾಡದ ಸುಭಾಸ ರಸ್ತೆಯಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಗಳು ಕೋಟಿ ಕೋಟಿ ರೂಪಾಯಿಗಳಿಗೆ ಬಿಕರಿಯಾಗುತ್ತಿವೆ. ಆದರೆ, ಪಾಲಿಕೆಗೆ ಇದ್ಯಾವುದು ಗೊತ್ತೆಯಿಲ್ಲ ಎಂಬಂತೆ ವರ್ತಿಸುತ್ತಿದೆ.

ಹುಬ್ಬಳ್ಳಿಯಲ್ಲಿಯೂ ಇದೇ ಸ್ಥಿತಿಯಿದೆ. ಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿನ ಮಳಿಗೆಗಳು ಚಿಲ್ಲರೇ ಕಾಸಿಗೆ ಬಾಡಿಗೆ ಕೊಡಲಾಗಿದೆ. ಅವರು ಅದನ್ನ ಬೇರೆಯವರಿಗೆ ಮಾರಾಟ ಮಾಡಿ, ಹಣ ಗಳಿಸುತ್ತಿದ್ದಾರೆ.

ಮಹಾನಗರ ಪಾಲಿಕೆಯು ತಾನು ನೀಡಿರುವ ವಾಣಿಜ್ಯ ಸಂಕೀರ್ಣದಲ್ಲಿನ ಮಳಿಗೆಗಳ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿದರೇ, ಕೋಟ್ಯಾಂತರ ರೂಪಾಯಿ ಆದಾಯ ಬರಲಿದೆ. ಕೆಲ ಪಾಲಿಕೆ ಸದಸ್ಯರೇ ಮುಂದೆ ನಿಂತು ಮಳಿಗೆಗಳನ್ನ ಮಾರಾಟ ಮಾಡಿಸಿ, ಕಮೀಷನರ್ ಕೂಡಾ ಪಡೆಯುತ್ತಿರುವುದು ರಹಸ್ತವಾಗಿ ಉಳಿದಿಲ್ಲ.


Spread the love

Leave a Reply

Your email address will not be published. Required fields are marked *

You may have missed