ಹುಬ್ಬಳ್ಳಿ: ಆಕಾಶ್ ಮಠಪತಿ ಸಾವು, ಮಾವ ಮೋಹನ ನಾಯಕ್, ಪತ್ನಿ ಕಾವ್ಯಾ ಸೇರಿ 12 ಜನರ ಮೇಲೆ FIR- 8ಜನ ಪೊಲೀಸ್ ವಶಕ್ಕೆ…
1 min readಹುಬ್ಬಳ್ಳಿ: ಹೋರಾಟಗಾರ ಹಾಗೂ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರ ಪುತ್ರ ಆಕಾಶನ ಅನುಮಾಸ್ಪದ ಸಾವಿನ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಆಕಾಶ್ ಪತ್ನಿ, ಅತ್ತೆ ಮಾವ ಸೇರಿ 12ಜನರ ವಿರುದ್ದ ದೂರು ದಾಖಲಾಗಿದೆ.
ಆಕಾಶ್ ತಂದೆ ಶೇಖರಯ್ಯ ಮಠಪತಿ ದೂರು ನೀಡಿದ್ದು, ಮೃತ ಆಕಾಶ್ ಹೆಂಡತಿ ಕಾವ್ಯಾ, ಅತ್ತೆ ಶ್ರೀದೇವಿ, ಮಾವ ಮೋಹನ ನಾಯಕ್ ಸೇರಿ 12 ಜನರ ವಿರುದ್ದ ದೂರು ದಾಖಲಾಗಿದೆ.
ಭರತ್ ನಾಯಕ್, ಅರ್ಜುನ್ ಮಗಲಿ, ಸಂಜು ಕೊಪ್ಪದ್, ರಾಹುಲ್ ಕಾಂಬಳೆ, ವಿನಾಯಕ ತಾಳಿಕೋಟಿ, ಮನೋಜ್, ಚಮಕ್ ಮೌನೇಶ್, ಮಹೇಶ್, ಕಾರ್ತಿಕ್ ರಜಪೂತ್, ಕಾವ್ಯಾ, ಶ್ರೀದೇವಿ ಹಾಗೂ ಮೋಹನ್ ನಾಯಕ್ ವಿರುದ್ದ ದೂರು ದಾಖಲಾಗಿದೆ.
ಮೃತ ಆಕಾಶ್ ಪತ್ನಿ, ಅತ್ತೆ ಮಾವನ ಕುಮ್ಮಕ್ಕಿನಿಂದಲೇ ಕೊಲೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 12 ಜನರ ಪೈಕಿ ಎಂಟು ಜನರನ್ನು ಪೊಲೀಸರು ಬಂಧಿಸಿದ್ದು, ಹಳೇ ಹುಬ್ಬಳ್ಳಿ ಠಾಣೆಯಲ್ಲಿ 12 ಜನರ ವಿರುದ್ದ IPC 1860 U/S 149-302 ಅಡಿಯಲ್ಲಿ ಕೇಸ್ ದಾಖಲಾಗಿದೆ.
ಆಟೋ ಚಾಲಕರ ಸಂಘಧ ಅಧ್ಯಕ್ಷ ಶೇಖರಯ್ಯ ಮಠಪತಿ ಪುತ್ರ ಆಕಾಶ್ ಮಠಪತಿ ನಿನ್ಮೆ ರಾತ್ರಿ ಅನುಮಾನಸ್ಪದ ಸಾವಾಗಿತ್ತು.
ಪ್ರೀತಿಸಿ ವಿವಾಹವಾಗಿದ್ದ ಆಕಾಶ್, ಇದೇ ಕಾರಣಕ್ಕೆ ಆಕಾಶ್ ಪತ್ನಿ, ಅತ್ತೆ ಮಾವನ ವಿರುದ್ದ ಆಕಾಶ್ ತಂದೆ ಶೇಖರಯ್ಯ ದೂರು ನೀಡಿದ್ದಾರೆ.