ಹುಬ್ಬಳ್ಳಿ: ಆಕಾಶ್ ಮಠಪತಿ ಸಾವಿನ ಹಿಂದಿನ “ಅಸಲಿ ಲವ್ ಸ್ಟೋರಿ” ಬಿಚ್ಚಿಟ್ಟ ತಂದೆ ಶೇಖರಯ್ಯ…!!!

ಹುಬ್ಬಳ್ಳಿ: ತನ್ನ ಮಗನ ಸಾವಿನ ಹಿಂದೆ ಆಕೆಯ ಸಹೋದರನೇ ಇದ್ದಾನೆ ಎಂದು ಮಗನನ್ನ ಕಳೆದುಕೊಂಡ ಶೇಖರಯ್ಯ ಮಠಪತಿ ಮಾಧ್ಯಮಗಳ ಮುಂದೆ ವಸ್ತುಸ್ಥಿತಿಯನ್ನ ಬಿಚ್ಚಿಟ್ಟರು.
ಪೂರ್ಣ ವೀಡಿಯೋ ನೋಡಿ…
ತಮ್ಮ ಮಗ ಆಕೆಯ ಜೊತೆಗೆ ತಿರುಗುತ್ತಿದ್ದ. ನಮಗೆ ಗೊತ್ತಿಲ್ಲದೇ ರಿಜಿಸ್ಟರ್ ಮದುವೆಯಾಗಿದ್ದ. ಆದಾದ ನಂತರವೂ ಐದು ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದೆ ಎಂದರು.
ಆತ ಖುಷಿಯಾಗಿರಲಿ ಎಂದು ಎಲ್ಲವನ್ನೂ ಮಾಡಿದ್ದೆ. ಈಗ ಕೆಲವು ದಿನಗಳ ಹಿಂದಷ್ಟೇ ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದೆ. ಈ ಸಾವಿನ ಹಿಂದೆ ಆಕಾಶನ ಹೆಂಡತಿಯ ತಮ್ಮ ಇದ್ದಾನೆಂದು ಆರೋಪಿಸಿದರು.