“ಧಾರವಾಡ-71” ಕ್ಷೇತ್ರದ ಎಲ್ಲ ಶಾಲೆಗಳಿಗೆ “ರವಿವಾರ ರಜೆಯಿಲ್ಲ”…
1 min readಧಾರವಾಡ: ಕಳೆದ ಬುಧವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ರಜೆಯನ್ನ ಘೋಷಣೆ ಮಾಡಿದ್ದ ಡಿಡಿಪಿಐ ಅವರು, ಈಗ ಬಿಇಓ ಮೂಲಕ ರವಿವಾರ ಶಾಲೆಗಳನ್ನ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.
ಸಿಇಓ ಸ್ವರೂಪಾ ಟಿಕೆ ಅವರ ಮೌಖಿಕ ಆದೇಶ ಹಾಗೂ ಬಿಇಓಗಳ ಕೋರಿಕೆಯ ಮೇರೆಗೆ ರಜೆಯನ್ನ ಬುಧವಾರ ಧಾರವಾಡ-71 ಕ್ಷೇತ್ರದ ಎಲ್ಲ ಶಾಲೆಗಳಿಗೆ ರಜೆಯನ್ನ ಘೋಷಣೆ ಮಾಡಲಾಗಿತ್ತು. ಅಂದಿನ ದಿನವನ್ನ ಬೇರೆ ಸಮಯದಲ್ಲಿ ಶಾಲೆ ನಡೆಸುವಂತೆ ಕೂಡಾ, ಆದೇಶದಲ್ಲಿ ನಮೂದು ಮಾಡಲಾಗಿತ್ತು.
ಡಿಡಿಪಿಐ ಆದೇಶದ ನಾಲ್ಕು ದಿನಗಳ ನಂತರ ಧಾರವಾಡ-71 ಕ್ಷೇತ್ರದ ಶಾಲೆಗಳಿಗೆ ರವಿವಾರ ರಜೆ ಇರೋದಿಲ್ಲ. ಆ ದಿನವನ್ನ ಸಂಪೂರ್ಣವಾಗಿ ಶಾಲೆ ನಡೆಸುವಂತೆ ಬಿಇಓ ಆದೇಶ ಹೊರಡಿಸಿದ್ದಾರೆ.