ಅನಿಲಕುಮಾರ ಪಾಟೀಲ “ಬಂಗಾರ ಹರಾಜಿಗೆ” ಬ್ಯಾಂಕ್ ನೋಟಿಸ್…!!

ಹುಬ್ಬಳ್ಳಿ: ಸಾಲದ ಹೊಣೆಗಾಗಿ ಅಡಮಾನವಿಟ್ಟ ಬಂಗಾರದ ಆಭರಣಗಳನ್ನ ಹರಾಜು ಹಾಕಲು ಬ್ಯಾಂಕ್ ಆಫ್ ಬರೋಡ ನಿರ್ಧರಿಸಿದ್ದು, ಅದಕ್ಕಾಗಿ ಹಲವರಿಗೆ ಬಹಿರಂಗ ನೋಟಿಸ್ ಜಾರಿ ಮಾಡಿದೆ.
ಹುಬ್ಬಳ್ಳಿಯ ವಿದ್ಯಾನಗರದ ಶಾಖೆ ಹಾಗೂ ವಿವಿಧ ಶಾಖೆಯಿಂದ ಪ್ರೇಮಕುಮಾರ ಹುಲಿಮಠ, ರೂಪಾರಾಣಿ ಪಾಟೀಲ, ಸಿದ್ಧನಗೌಡ ಜೀವನಗೌಡ ಜೀವನಗೌಡ್ರ, ಅನಿಲಕುಮಾರ ಪಿ. ಪಾಟೀಲ ಹಾಗೂ ಬೆನಕಪ್ಪ ಹನಮಂತಪ್ಪ ತೋಟಕರ ಸಾಲ ಪಡೆದಿರುವ ಬಗ್ಗೆ ನೋಟಿಸ್ ಹೊರ ಹಾಕಲಾಗಿದೆ.
ಮಾರ್ಚ 17 ರೊಳಗೆ ಹಣ ಮರಳಿಸದೇ ಇದ್ದಲ್ಲಿ ಮಾರ್ಚ 18 ರಂದು ಹರಾಜು ಮಾಡಲಾಗುವುದೆಂದು ಬ್ಯಾಂಕ್ ಆಫ್ ಬರೋಡ ಬಹಿರಂಗ ನೋಟಿಸ್ ಜಾರಿ ಮಾಡಿದೆ.