ಧಾರವಾಡಕ್ಕಿಂದು ಗೂಡ್ ನ್ಯೂಸ್: 427 ಹೊಸ ಕೇಸ್- 431 ಸೋಂಕಿತರು ಗುಣಮುಖ..!

ಬೆಂಗಳೂರು: ರಾಜ್ಯದಲ್ಲಿಂದು 35024 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 270 ಸೋಂಕಿತರು ರಾಜ್ಯದಲ್ಲಿಂದು ಸಾವಿಗೀಡಾಗಿದ್ದಾರೆ.

ಇಂದಿನ ಹೆಲ್ತ್ ಬುಲೆಟಿನ್ ದಲ್ಲಿ ಬೆಂಗಳೂರೊಂದರಲ್ಲಿ 19637 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 143 ಸೋಂಕಿತರು ಸಾವಿಗೀಡಾಗಿದ್ದಾರೆ. ಬೆಂಗಳೂರು ಹೊರತುಪಡಿಸಿದರೇ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು 1219 ಪ್ರಕರಣಗಳು ಪತ್ತೆಯಾಗಿವೆ.
ಧಾರವಾಡ ಜಿಲ್ಲೆಯಲ್ಲಿ ಇಂದು ಬಿಡುಗಡೆಯಾದವರ ಸಂಖ್ಯೆಗಿಂತ ಕಡಿಮೆ ಪ್ರಮಾಣದ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಧಾರವಾಡದಲ್ಲಿ ನಾಲ್ಕು ಜನ ಸೋಂಕಿತರು ಸಾವಿಗೀಡಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ 3479 ಕೊರೋನಾ ಪ್ರಕರಣಗಳು ಸಕ್ರಿಯವಾಗಿವೆ.