ಖಾಸಗಿ ವಾಹನದಲ್ಲಿ ಹುಬ್ಬಳ್ಳಿಗೆ ಬಂದ ಸಚಿವ ಸಿ.ಸಿ.ಪಾಟೀಲ….!

ಹುಬ್ಬಳ್ಳಿ: ರಾಜ್ಯದಲ್ಲಿ ಹಲವು ರೀತಿಯ ರಾಜಕೀಯ ಘಟನಾವಳಿಗಳು ನಡೆಯುತ್ತಿರುವ ಸಮಯದಲ್ಲಿ ಸಚಿವ ಸಿ.ಸಿ.ಪಾಟೀಲ ಖಾಸಗಿ ವಾಹನದಲ್ಲಿ ಹುಬ್ಬಳ್ಳಿಗೆ ಬಂದಿರುವುದು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುವಂತಾಗಿದೆ.

ಸವದತ್ತಿ ಮೂಲಕ ಬರುವ ಸಮಯದಲ್ಲಿ ಪೊಲೀಸರ ವಾಹನವೂ ಕೂಡಾ, ಖಾಸಗಿ ವಾಹನದಲ್ಲಿ ಸಚಿವ ಸಿ.ಸಿ.ಪಾಟೀಲ ಅವರು ಬಂದಿದ್ದನ್ನ ಗುರುತಿಸದೇ ಬೇರೆ ವಾಹನದ ಮುಂದೆ ಹೋಗಿದ್ದಾರೆಂದು ಹೇಳಲಾಗಿದೆ.
ಯಾವುದೇ ಎಸ್ಕಾರ್ಟ್ ಇಲ್ಲದೇ ಹುಬ್ಬಳ್ಳಿಗೆ ಬಂದ ನಂತರ ಸ್ಥಳೀಯವಾಗಿರುವ ಶಹರದ ಪೊಲೀಸ್ ವಾಹನವೊಂದು ಎಸ್ಕಾರ್ಟ್ ನೀಡಿದೆ. ಯಾವುದೇ ಕಾರಣವೂ ಇಲ್ಲದೇ ಸಿ.ಸಿ.ಪಾಟೀಲರು ಒಂದು ಗಂಟೆಗೂ ಹೆಚ್ಚು ಕಾಲ ಹುಬ್ಬಳ್ಳಿಯ ಸರ್ಕೀಟ್ ಹೌಸನಲ್ಲಿ ಸಮಯ ಕಳೆದರು.

ಮೂರರಿಂದ ನಾಲ್ಕು ಜನರು ರಾಜಕೀಯೇತರ ವ್ಯಕ್ತಿಗಳು ಅವರ ಜೊತೆಗಿದ್ದು, ಮತ್ತೆ ಹೋಗುವಾಗಲೂ ಅವರೊಬ್ಬರೇ ವಾಹನದಲ್ಲಿ ಹೋಗಿರುವುದು ಗೊತ್ತಾಗಿದೆ. ಸಚಿವ ಸಿ.ಸಿ.ಪಾಟೀಲ ಅವರು, ಹೀಗೇಕೆ ಬಂದು ಹೋದರು ಎಂಬ ಪ್ರಶ್ನೆ ಮೂಡುವಂತಾಗಿದೆ.