ಕಿಲ್ಲರ ಬೈಪಾಸ್: “ಆ” ಮಹಿಳೆಯರಿಗಾಗಿ “ಈ” ಮಹಿಳೆಯರು ದೀಪ ಹಚ್ಚಿದ್ರು..!
1 min read
ಧಾರವಾಡ: ಕಳೆದ ಆರು ದಿನಗಳ ಹಿಂದೆ ಧಾರವಾಡ ಸಮೀಪದ ಇಟಿಗಟ್ಟಿ ಬಳಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಕ್ಯಾಂಡಲ್ ಮಾರ್ಚ್ ನಡೆಸಿತು.
ಧಾರವಾಡ ಕಲಾಭವನದಿಂದ ಸುಭಾಸ್ ರಸ್ತೆಯ ವಿವೇಕಾನಂದ ಸರ್ಕಲ್ ವರೆಗೂ ಕ್ಯಾಂಡಲ್ ಮಾರ್ಚ್ ಮಾಡಿ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು. ಇದೇ ಸಮಯದಲ್ಲಿ ಬೈಪಾಸ್ ಅಗಲೀಕರಣ ಮಾಡಬೇಕೆಂದು ಒತ್ತಾಯಿಸಲಾಯಿತು.
ವಿವೇಕಾನಂದ ವೃತ್ತದಲ್ಲಿ ಮಾತನಾಡಿದ ಹುಬ್ಬಳ್ಳಿ ಧಾರವಾಡ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ನಾಗರಾಜ ಗೌರಿ, ಅಪಘಾತದಲ್ಲಿ ಸಾವಿಗೀಡಾದ ಮಹಿಳೆಯರ ಆತ್ಮಕ್ಕೆ ಸಿಗಲಿ. ಇಂತಹ ದುರ್ಮರಣಗಳು ನಡೆಯದಂತೆ ಮೊದಲು ಬೈಪಾಸ್ ವಿಸ್ತರಣೆ ಮಾಡಲಿ ಎಂದರು.
ಬ್ಲಾಕ್ ಅಧ್ಯಕ್ಷರುಗಳಾದ್ ಸಂಗೀತಾ ಪೂಜಾರಿ, ಗೌರಿ ನಾಡಗೌಡ, ಚೇತನಾ ಲಿಂಗದಾಳ, ಅಕ್ಕಮ್ಮ ಕಂಬಳಿ, ಬಾಳಮ್ಮ ಜಂಗನವರ, ಲಕ್ಶ್ಮೀ ಗುತ್ತೆ, ಗೌರಿ ರಿತ್ತಿ, ಕುರುಬರ್ ಕಾಂಚನ ಘಾಟಗೆ, ಪೂರ್ಣಿಮಾ ಸವದತ್ತಿ, ಹೇಮಾ ಹೊಸಮನಿ, ಪ್ರೀತಿ ಜೈನ, ಜಯಶ್ರೀ ದೇಶಮಾನ್ಯ್, ಜಗದೇವಿ ಚಿಚೋಳ್ಳಿ, ತ್ರಿಶಿಲ ಹಳೆಬಸಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.