ವಿನಯ ಕುಲಕರ್ಣಿ ಹುಲಿ ಐತೀ.. ಬೋನ್ ಒಳಗ್ ಎಷ್ಟ್ ದಿನಾ ಇರತೈತಿ: ಹಿಂಗದವರಾರೂ ಗೊತ್ತಾ,,

ಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿ ಹುಲಿಯಿದ್ದ ಹಾಗೇ. ಬೋನ್ ಒಳಗೆ ಎಷ್ಟು ದಿನ ಇರುತ್ತಾರೆ. ಒಂದಿಲ್ಲಾ ಒಂದೀನ ಹೊರಗೆ ಬಂದೆ ಬರುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಹಲವು ಬಾರಿ ಸಿಬಿಐ ವಿಚಾರಣೆಗೆ ಒಳಗಾಗಿರುವ ನಾಗರಾಜ ಗೌರಿ ಹೇಳಿದರು.
ಜಿಲ್ಲಾ ಪಂಚಾಯತಿ ಸದಸ್ಯ ಸುರೇಶಗೌಡ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಮಲ್ಲಮ್ಮ ಗೌಡರ ಬಗ್ಗೆ ಮಾತನಾಡಿದ್ದೇನು ಗೊತ್ತಾ.. ಇಲ್ಲಿದೆ ನೋಡಿ..
ಸಿಬಿಐ ವಿಚಾರಣೆಗೆ ಹೋಗಿ ಬಂದ ನಂತರ ಹಲವು ವಿಷಯಗಳನ್ನ ನಾಗರಾಜ ಗೌರಿ ಮಾತನಾಡಿದ್ರು. ವಿನಯ ಕುಲಕರ್ಣಿ ವಿರುದ್ಧ ಷಢ್ಯಂತ್ರ ನಡೆದಿದೆ. ನಮ್ಮ ಮುಖಂಡರು ಕೂಡಾ ಎಲ್ಲವನ್ನೂ ಹೇಳಿದ್ದಾರೆ. ಅವರು ಹೊರಗಡೆ ಬಂದೇ ಬರುತ್ತಾರೆ ಎಂದು ಭರವಸೆವ್ಯಕ್ತಪಡಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷೆಯಾಗಿದ್ದ ಮಲ್ಲಮ್ಮ ಗೌಡರರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡ ಬಗ್ಗೆಯೂ ನನ್ನ ವಿಚಾರಣೆ ಮಾಡಿದ್ದಾರೆಂದು ಹೇಳಿದರು.