ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ- 9ಜನರ ಬಂಧನ
1 min read
ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ ಅಪಹರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು ಒಂಬತ್ತು ಜನರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರವಿ ಪೂಜಾರಿ ಶಿಷ್ಯ ಕವಿರಾಜ್ ನೇತೃತ್ವದಲ್ಲಿ ಅಪಹರಣ ನಡೆದಿತ್ತು. ಇದಕ್ಕೆ ಸಂಬಂಧಿಸಿದ ಹಾಗೇ ಕವಿರಾಜ ಸಮೇತ 9 ಜನರನ್ನ ಬಂಧನ ಮಾಡಲಾಗಿದೆ. ಬಂಧಿತರನ್ನ ಕವಿರಾಜ್, ಉಲಾಸ್ ರೆಡ್ಡಿ, ಲಿಖಿತ್, ಮನೋಜ್, ರೋಹಿತ್ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಇನ್ನೋರ್ವ ಪರಾರಿಯಾಗಿದ್ದಾನೆಂದು ಹೇಳಲಾಗಿದೆ.
ಕಳೆದ ನ.25 ರಂದು ಕೋಲಾರದ ಬೆಗ್ಲಿಹೊಸಹಳ್ಳಿ ಯಿಂದ ಕಿಡ್ನಾಪ್ ಮಾಡಿ 30 ಕೋಟಿಗೆ ಬೇಡಿಕೆ ಇಟ್ಟು 48 ಲಕ್ಷ ಹಣ ಪಡೆದಿದ್ದ ಆರೋಪಿಗಳ ವಿರುದ್ಧ ಮಾಜಿ ಸಚಿವ ವರ್ತೂರು ಪ್ರಕಾಶ್ ರಿಂದ ದೂರು ನೀಡಿದ್ದರು.
ಕೋಲಾರ ಎಸ್ ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಆರೋಪಿಗಳನ್ನ ಸೆರೆ ಹಿಡಿಯಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.