ಆ ಮಹಿಳೆಯೂ- ಆ ರೌಡಿ ಷೀಟರನ ತಾಯಿಯೂ: ಅದು ಜಡೆ ಜಗಳವಂತೆ..!

ಹುಬ್ಬಳ್ಳಿ: ನಗರದ ಹೆಗ್ಗೇರಿ ಪ್ರದೇಶದ ಮಾರುತಿ ನಗರದಲ್ಲಿನ ಮಹಿಳೆಯೋರ್ವಳ ಮೇಲೆ ನಡೆದಿರುವ ಹಲ್ಲೆ ಪ್ರಕರಣದಲ್ಲಿ ರೌಡಿಷೀಟರ್ ಹೊಡೆದಿದ್ದು, ಮತ್ತೀಗ ಆತನ ಮೇಲೆ ದೂರು ದಾಖಲಾಗಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದರೆ, ಇದು ಮಹಿಳೆಯರಿಬ್ಬರ ಹಳೇ ಜಗಳವೆಂದು ಹೇಳಲಾಗುತ್ತಿದೆ.
ಹೊಡೆಸಿಕೊಂಡು ರಕ್ತ ಬರುವಾಗಲೇ ಅದನ್ನ ವರಿಸಿಕೊಳ್ಳದೇ ವೀಡಿಯೋ ಮಾಡಿರುವ ಮಹಿಳೆಯ ಹೆಸರು ಮಾಯವ್ವ(ಹೆಸರು ಬದಲಾಯಿಸಲಾಗಿದೆ). ಈಕೆಯನ್ನ ಕೆಲವು ವರ್ಷಗಳ ಹಿಂದೆ ಕೆಲವರು ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆದಿದ್ದರೂ ಕೂಡಾ. ಆಗಿನಿಂದಲೂ ಬೇರೆ ಥರದ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗಿದೆ.
ಈಗ ಆರೋಪ ಮಾಡಿರುವ ಪ್ರೇಮಾ ಹೆಬ್ಬಳ್ಳಿ ಕೂಡಾ, ವೈರಲ್ ವೀಡಿಯೋದಲ್ಲಿರುವ ಮಹಿಳೆಯ ಗೆಳತಿಯೇ ಆಗಿದ್ದರು ಎನ್ನುವುದು ಪೊಲೀಸರಿಗೆ ಗೊತ್ತಿರುವ ಮಾಹಿತಿಯೇ ಆಗಿದೆ. ಪ್ರಕರಣದಲ್ಲಿ ರೌಡಿ ಷೀಟರ್ ಸಚಿನ್ ಹೆಬ್ಬಳ್ಳಿ ಹಾಗೂ ರಾಕೇಶ ಹೆಬ್ಬಳ್ಳಿ ಭಾಗಿಯಾಗಿದ್ದಾರೆಂದು ಈಗಾಗಲೇ ದೂರು ದಾಖಲಾಗಿದೆ.
ಇದೀಗ ಈ ಪ್ರಕರಣ ಹಳೇಹುಬ್ಬಳ್ಳಿ ಠಾಣೆಯಲ್ಲಿ ದಾಖಲಾಗಿದ್ದು, ದೂರಿನಲ್ಲಿರುವ ಹೆಸರಿನ ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ. ಆದರೆ, ವೈರಲ್ ವೀಡಿಯೋದ ಹಿಂದೆ ಬೇರೆಯದ್ದೇ ರೀತಿಯ ತಂತ್ರವಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.