ಸಾವಿರಾರು ಜನರಿಗೆ ಮಾದರಿ ಈ ಸರಕಾರಿ ಶಾಲೆ ಶಿಕ್ಷಕ..!
1 min read
ಹಾಸನ: ಗುರು ಬ್ರಹ್ಮ.. ಗುರು ವಿಷ್ಣು.. ಗುರು ದೇವೋ ಮಹೇಶ್ವರ ಎಂದು ಸುಮ್ಮನೆ ಕರೆದಿಲ್ಲ. ಇದಕ್ಕೆ ನೂರೆಂಟು ಅರ್ಥಗಳಿದ್ದರೂ ಶಿಕ್ಷಕ ಮಾತ್ರ ತಾನೂ ಸಮಾಜಕ್ಕೆ ಇರುವುದು ಎಂದುಕೊಂಡು ಕಾರ್ಯನಿರ್ವಹಿಸುತ್ತಲೇ ಇರುತ್ತಾರೆ. ಅಂತಹ ಶಿಕ್ಷಕರೊಬ್ಬರನ್ನ ನೀವೂ ಪರಿಚಯ ಮಾಡಿಕೊಳ್ಳಿ.
ಸರಕಾರಿ ಶಾಲೆಯ ಮೈದಾನದಲ್ಲಿ ಬೆಳೆದ ಕಸ-ಗಂಟಿಗಳನ್ನ ತೆಗೆಯಲು ಸಲಿಕೆ ಹಿಡಿದು ನಿಂತಿರುವುದು ಯಾವುದೋ ಕೂಲಿ ಕಾರ್ಮಿಕನಲ್ಲ. ಬದಲಾಗಿ ಅದೇ ಶಾಲೆಯ ಶಿಕ್ಷಕರು..
ಹೌದು.. ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಸನ ಜಿಲ್ಲೆ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಶಿಕ್ಷಕ ಶಿವಪ್ರಕಾಶ ಜಿ.ಎಂ, ತಮ್ಮ ಶಾಲೆಯನ್ನ ಹೀಗೆ ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ.
ಮಕ್ಕಳಿಲ್ಲದೇ, ಪಾಠವೂ ಇಲ್ಲದೇ ಶಾಲೆಯಂಗಳದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಅದನ್ನ ತಾವೇ ನಿಂತು ತೆಗೆಯುತ್ತಿರುವುದು ಇತರ ಶಿಕ್ಷಕರಿಗೂ ಮಾದರಿಯಾಗಿದೆ.