ತಹಶೀಲ್ದಾರ ಪತ್ನಿ ಆತ್ಮಹತ್ಯೆ
1 min read
ಬಳ್ಳಾರಿ: ತಹಶೀಲ್ದಾರ ಪತಿ ಹೊರಗಡೆ ಹೋದ ನಂತರ ಸರಕಾರಿ ನಿವಾಸದಲ್ಲಿಯೇ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ಸರಕಾರಿ ವಸತಿ ಗೃಹದಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ತಹಶೀಲ್ದಾರರಾಗಿದ್ದ ಸತೀಶ ಬಿ.ಕೂಡಲಗಿಯವರ ಪತ್ನಿ ಶಂಕ್ರಮ್ಮ ಎನ್ನುವವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 55 ವರ್ಷದ ಶಂಕ್ರಮ್ಮಯಾವ ಕಾರಣಕ್ಕೆ ಸಾವಿಗೆ ಶರಣಾಗಿದ್ದಾರೆಂದು ತಿಳಿದು ಬಂದಿಲ್ಲ.
ತಹಶೀಲ್ದಾರ ಸತೀಶ ಬಿ.ಕೂಡಲಗಿಯವರು ಇತ್ತೀಚೆಗೆ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದರು. ಹೀಗಾಗಿ ಅಲ್ಲಿಯೇ ಇರುವ ಪ್ರಸಂಗವೂ ಒದಗಿ ಬರುತ್ತಿತ್ತು. ಇಂತಹ ಸಮಯದಲ್ಲಿ ಘಟನೆ ನಡೆದಿದೆ.
ಸ್ಥಳಕ್ಕೆ ಸಿರಗುಪ್ಪ ಶಾಸಕ ಸೋಮಶೇಖರ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನೇಣಿನಲ್ಲಿರುವ ಶವವನ್ನ ಶಂಕ್ರಮ್ಮನವರ ಸಂಬಂಧಿಕರು ಬರುವವರೆಗೂ ತೆಗೆಯಬಾರದೆಂದು ಹೇಳಲಾಗಿದ್ದರಿಂದ ಅವರ ಆಗಮನಕ್ಕಾಗಿ ಕ್ವಾಟರ್ಸ್ ಎದುರಿಗೆ ಪೊಲೀಸರು ಕಾಯುವಂತಾಗಿದೆ.