ಧಾರವಾಡ ಉಪನಗರ ಠಾಣೆ: ಮನಿಯಾರ ಬಂಧನ
1 min read
ಧಾರವಾಡ: ನಗರದಲ್ಲಿ ಐಪಿಎಲ್ ಬೆಟ್ಟಿಂಗ್ ಹಾವಳಿಯನ್ನ ತಪ್ಪಿಸಲು ಪೊಲೀಸರು ನಿರಂತರವಾಗಿ ಪ್ರಯತ್ನ ಪಡುತ್ತಿದ್ದರು, ಹೊಸ ಹೊಸ ಮುಖಗಳು ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬರುತ್ತಲೇ ಇದೆ. ಉಪನಗರ ಠಾಣೆಯಲ್ಲಿ ಮತ್ತಿಬ್ಬರು ಯುವಕರು ಸಿಕ್ಕಿಬಿದ್ದಿದ್ದು, ಬೆಟ್ಟಿಂಗ್ ಆಡುತ್ತಿದ್ದದ್ದು ಬಯಲಿಗೆ ಬಂದಿದೆ.
ಧಾರವಾಡ ಮಾಳಾಪುರ ಲಾಸ್ಟ್ ಬಸ್ ಸ್ಟಾಪ್ ಹತ್ತಿರದ ನಿವಾಸಿ ಲತೀಫ ತಂಬೋಲಿ ಹಾಗೂ ಇಜಾಜಅಹ್ಮದ ಮನಿಯಾರ ಎಂಬುವವರು ಬಂಧಿತರಾಗಿದ್ದು, ಬಂಧಿತರಿಂದ 15100 ರೂಪಾಯಿ ಹಾಗೂ ಎರಡು ಮೊಬೈಲಗಳನ್ನ ವಶಕ್ಕೆ ಪಡೆಯಲಾಗಿದೆ.
ಸನ್ ರೈಜರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ಆರೋಪಿಗಳು ಬೆಟ್ಟಿಂಗ್ ಜೂಜಾಟ ನಡೆಸುತ್ತಿದ್ದರೆಂದು ಪೊಲೀಸರು ಮಾಹಿತಿಯನ್ನ ನೀಡಿದ್ದಾರೆ. ಇನ್ಸಪೆಕ್ಟರ್ ಪ್ರಮೋದ ಎಲಿಗಾರ, ಪಿಎಸ್ಐ ಎಸ್.ಎಂ.ಹುಣಸಿಕಟ್ಟಿ ಸಿಬ್ಬಂದಿಗಳಾದ ಕಿರಣ ಡೊಕ್ಕನವರ, ರಮೇಶ ಬದ್ನಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.