ಹುಬ್ಬಳ್ಳಿ IBMR ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು
1 min read
ಹುಬ್ಬಳ್ಳಿ: ನಗರದ IBMR ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ನಡೆದಿದೆ.
ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಐಶ್ವರ್ಯ ಹಿರೇಮಠ ಎಂಬ ವಿದ್ಯಾರ್ಥಿನಿಯೇ ಸಾವಿಗೀಡಾಗಿದ್ದಾಳೆ. ಕೊರೋನಾ ಹಿನ್ನೆಲೆಯಲ್ಲಿ ತನ್ನೂರಿಗೆ ಹೋದಾಗಲೇ ಇಂತಹ ಅವಘಡ ಮಾಡಿಕೊಂಡಿದ್ದಾಳೆ.
ನಗರದಲ್ಲಿದ್ದಾಗ ಗೆಳತಿಯರೊಂದಿಗೆ ಚೆನ್ನಾಗಿಯೇ ಇದ್ದ ಐಶ್ಚರ್ಯ ಕಳೆದ ವಾರ, ಹುಬ್ಬಳ್ಳಿಗೆ ಬಂದು ಹೋಗಿದ್ದಳು. ಯಾವಾಗಲೂ ಲವಲವಿಕೆಯಿಂದಲೇ ಇರುತ್ತಿದ್ದ ಈಕೆ, ಮನೆಯವರು ಹೊರಗಡೆ ಹೋದಾಗ ರೂಮಿನಲ್ಲಿ ನೇಣು ಹಾಕಿಕೊಂಡಿದ್ದಾಳೆ.
ಕಾಲೇಜುಗಳ ಆರಂಭವಾಗಲು ಇನ್ನೆರಡು ದಿನಗಳು ಬಾಕಿಯಿರುವಾಗಲೇ ವಿದ್ಯಾರ್ಥಿನಿಯೋರ್ವಳು, ಹೀಗೆ ಪ್ರಾಣ ಕಳೆದುಕೊಂಡಿರುವುದು ಮನೆಯವರ ನೆಮ್ಮದಿಯನ್ನ ಹಾಳು ಮಾಡಿದೆ.