ಶಾಲೆ ಆರಂಭಕ್ಕೆ ಕ್ಷಣಗಣನೆ- ಬಿಡಿಗಾಸು ಬರುತ್ತಿಲ್ಲ ಅನುದಾನ..! “ ಮಂದಿ ಕೇಳ್ರೀ ಅಂತಿದೆ ಸರಕಾರ”
1 min read
ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ಜನೇವರಿ ಒಂದರಿಂದ 6ನೇ ತರಗತಿಯಿಂದ 9ನೇ ತರಗತಿವರೆಗೆ ವಿದ್ಯಾಗಮ ಕಾರ್ಯಕ್ರಮವನ್ನ ಆರಂಭಿಸಲು ಸರಕಾರ ಈಗಾಗಲೇ ಸೂಚನೆ ನೀಡಿದ್ದು, ಎಲ್ಲ ವ್ಯವಸ್ಥೆಯನ್ನೂ ನೀವೇ ಮಾಡಿಕೊಳ್ಳಿ ಎಂದು ಶಿಕ್ಷಕರಿಗೆ ಅಧಿಕಾರಿಗಳು ಸೂಚನೆ ನೀಡುತ್ತಿರುವುದನ್ನ ನೋಡಿದ್ರೇ, ಶಿಕ್ಷಕರನ್ನ ಬೀದಿ ಬೀದಿ ಅಲೆಸುವ ಆಲೋಚನೆ ಸರಕಾರಕ್ಕೀದೆ ಎನಿಸುತ್ತಿದೆ.
ಕೊರೋನಾ ಮಹಾಮಾರಿಯ ರೂಪಾಂತರ ವೈರಸ ಹಾವಳಿಯ ಭಯದ ಮಧ್ಯೆ ಶಾಲೆಗಳಲ್ಲಿ ವಿದ್ಯಾಗಮ ಆರಂಭಿಸಲು ಹಲವು ಮುಂಜಾಗ್ರತೆ ಕ್ರಮಗಳನ್ನ ಸರಕಾರ ಸೂಚನೆ ಮಾಡಿದೆ. ಆದರೆ, ಅದಕ್ಕೆ ತಗಲುವ ವೆಚ್ಚವನ್ನ ಭರಿಸಲು, ಸರಕಾರ ಯಾವುದೇ ರೀತಿಯ ಅನುದಾನವನ್ನ ನೀಡಿಲ್ಲ.
ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಹಲವು ಕ್ರಮವನ್ನ ತೆಗೆದುಕೊಳ್ಳಬೇಕಾಗಿದೆ. ಇದಕ್ಕೆ ಹಣಕಾಸಿನ ಅವಶ್ಯಕತೆಯಿದೆ. ಆದರೆ, ಆ ಬಗ್ಗೆ ಅಧಿಕಾರಿಗಳು ಶಿಕ್ಷಕರಿಗೆ ಆದೇಶವೊಂದನ್ನ ನೀಡಿದ್ದು, ಆ ಪ್ರಕಾರ ವ್ಯವಸ್ಥೆ ಮಾಡಬೇಕಿದೆ. ಅದಕ್ಕೆ ಹಣವನ್ನ ಎಸ್ ಡಿಎಂಸಿ ಅಥವಾ ಸಾರ್ವಜನಿಕರಿಂದ ಕೇಳಿ ಪಡೆಯಿರಿ ಎಂದು ಹೇಳಲಾಗುತ್ತಿದೆ.
ಇದು ಹಲವು ತೊಂದರೆಗಳಿಗೆ ಕಾರಣವಾಗುತ್ತಿದೆ. ಸ್ವಚ್ಚತೆಯ ಬಗ್ಗೆ ಗ್ರಾಮ ಪಂಚಾಯತಿಗಳೂ ಹಾಗೂ ನಗರಸಭೆ, ಪುರಸಭೆಗಳು ಮಾಡಬೇಕಾಗಿದೆ. ಅದಕ್ಕೂ ಶಿಕ್ಷಕರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರ ಖಡಕ್ ಆದೇಶವನ್ನ ನೀಡಿದರೇ ಮಾತ್ರ ವಿದ್ಯಾಗಮ ನಿರಾಂತಕವಾಗಿ ನಡೆಯುತ್ತದೆ ಹೊರತು, ಅನುದಾನವೂ ಇಲ್ಲಾ.. ವ್ಯವಸ್ಥೆಯೂ ಇಲ್ಲವೆಂದರೇ ಕಷ್ಟ.. ಕಷ್ಟ..