ನಿಮ್ಮ ಮಕ್ಕಳನ್ನ ಸೈನಿಕ ಶಾಲೆಗೆ ಸೇರಿಸಬೇಕು ಅಂದ್ಕೊಂಡಿದ್ದೀರಾ..! ಹೇಗೆ.. ಎಲ್ಲಿ ಅರ್ಜಿ ಹಾಕಬೇಕು ಗೊತ್ತಾ..!
1 min readಧಾರವಾಡ: ನಿಮ್ಮ ಮಕ್ಕಳನ್ನ ಸೈನಿಕ ಶಾಲೆಗಳಿಗೆ ಸೇರಿಸಬೇಕು. ಅತ್ಯುತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಎನ್ನುವ ಉಮೇದಿ ಹೊಂದಿದ್ದರೇ ನಿಮಗೆ ಒಂದಿಷ್ಟು ಮಾಹಿತಿ ಬೇಕಾದರೇ ಸಂಪೂರ್ಣವಾದ ಮಾಹಿತಿಯನ್ನ ನೋಡಿ.
ಕರ್ನಾಟಕ ರಾಜ್ಯದ ವಿಜಯಪುರ ಮತ್ತು ಕೊಡಗು ಸೈನಿಕ ಶಾಲೆಯಲ್ಲಿ 2021ನೇ ಸಾಲಿನ 6ನೇ ತರಗತಿಗೆ ಬಾಲಕ-ಬಾಲಕಿಯರಿಗೆ ಮತ್ತು 9ನೇ ತರಗತಿಗೆ ಕೇವಲ ಬಾಲಕರ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿಯನ್ನ ಆಹ್ವಾನ ಮಾಡಲಾಗಿದೆ.
ಅರ್ಜಿಯನ್ನ ಇದೇ ತಿಂಗಳ 20ರಿಂದ ಆರಂಭಿಸಲಾಗಿದ್ದು, ನವೆಂಬರ್ 19ರೊಳಗೆ ನೀವೂ ಅರ್ಜಿಯನ್ನ ಭರ್ತಿ ಮಾಡಿ ಕಳಿಸಬೇಕಿಬೇಕಿದ್ದು, ಜನವೇರಿ 10,2021ರಂದು ಪರೀಕ್ಷೆ ನಡೆಯಲಿದೆ.
ಅರ್ಜಿ ಸಲ್ಲಿಸುವಾಗ 5ನೇ ತರಗತಿ ಮತ್ತು 8ನೇ ತರಗತಿ ಕಲಿಯುತ್ತಿರುವ ಬಗ್ಗೆ ಶಾಲಾ ದಾಖಲಾತಿಯನ್ನ ನೀಡಬೇಕು. ವಿದ್ಯಾರ್ಥಿಯ ಭಾವಚಿತ್ರ, ಹೆಬ್ಬೆಟ್ಟಿನ ಗುರುತು ಸೇರಿದಂತೆ ಹಲವು ದಾಖಲಾತಿಗಳ ಅವಶ್ಯಕತೆಯಿದೆ.