ಕ್ಯಾ ಬಾ ಅಣ್ಣಾ.. ಕಾಟನೇಕಾ ಬಂದ್ ಕೀಯಾಕೀ ನಹೀ.. ಹಳೇಹುಬ್ಬಳ್ಳಿ ಠಾಣೆಯಲ್ಲಿ ರೌಡಿಗಳೇನಂದ್ರು ಗೊತ್ತಾ..!
1 min read
ಇನ್ಸಪೆಕ್ಟರ್ ಶಿವಾನಂದ ಕಮತಗಿ ಪ್ರತಿಯೊಬ್ಬ ರೌಡಿ ಷೀಟರುಗಳಿಗೂ ಖಡಕ್ ವಾರ್ನಿಂಗ್ ನೀಡಿದ್ದು, ಬಾಲ ಬಿಚ್ಚಿದರೇ ಬಿಡುವುದಿಲ್ಲವೆಂದು ಹೇಳಿದ್ದಾರೆ.
ಹುಬ್ಬಳ್ಳಿ: ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ತೀವ್ರ ನಿಗಾವನ್ನ ವಹಿಸುತ್ತಿದ್ದು, ರೌಡಿ ಷೀಟರಗಳಿಗೆ ಪರೇಡ್ ನಡೆಸಿ, ಎಚ್ಚರಿಕೆ ನೀಡಲಾಗುತ್ತಿದೆ. ಹಳೇಹುಬ್ಬಳ್ಳಿ ಠಾಣೆ ವ್ಯಾಪ್ತಿಯ ರೌಡಿ ಷೀಟರಗಳಿಗೂ ಪೊಲೀಸರಿಂದು ಲೆಪ್ಟ್ ರೈಟ್ ತೆಗೆದುಕೊಂಡರು.
ಹುಬ್ಬಳ್ಳಿಯ ಕೆಲವು ಠಾಣೆಗಳ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಅವುಗಳನ್ನ ಸಂಪೂರ್ಣವಾಗಿ ತಡೆಗಟ್ಟಲು ಪೊಲೀಸರು ತೀಕ್ಷವಾಗಿಯೂ, ಎಚ್ಚರಿಕೆಯಿಂದಲೂ ಹೆಜ್ಜೆಯಿಡತೊಡಗಿದ್ದಾರೆ. ಇದೇ ಕಾರಣಕ್ಕೆ ಹಳೇಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ರೌಡಿ ಷೀಟರಗಳಿಗೆ ಪರೇಡ್ ನಡೆಸಲಾಯಿತು.
60 ಕ್ಕೂ ಹೆಚ್ಚು ರೌಡಿ ಷೀಟರಗಳನ್ನ ಕರೆಸಿದ ಪೊಲೀಸರು, ನಿಮ್ಮ ನಿಮ್ಮ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೇ ನೀವೇ ಜವಾಬ್ದಾರರು. ಹಾಗಾಗಿ, ಯಾವುದೇ ದುರ್ಘಟನೆಗಳು ನಡೆಯದಂತೆ ಇರಬೇಕೆಂದು ಎಚ್ಚರಿಕೆ ನೀಡಿದರು.
ಸಾಮಾನ್ಯ ಜನರಿಗೆ ನಿಮ್ಮಿಂದ ತೊಂದರೆಯಾದರೇ ಪೊಲೀಸರು ಸುಮ್ಮನೆ ಕೂಡುವುದಿಲ್ಲ. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆ ನಡೆಸಬಾರದೆಂದು ತಾಕೀತು ಮಾಡಿ, ಎಲ್ಲರಿಗೂ ಎಚ್ಚರಿಕೆ ನೀಡಿ ಕಳಿಸಲಾಗಿದೆ.