ರವಿಬೆಳಗೆರೆ ನಿಧನಕ್ಕೆ ಕಲಘಟಗಿ ಪತ್ರಕರ್ತರಿಂದ ಸಂತಾಪ
1 min read
ಕಲಘಟಗಿ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಖ್ಯಾತ ಪತ್ರಕರ್ತ ರವಿಬೆಳೆಗೆರೆ ನಿಧನಕ್ಕೆ ಸಂತಾಪ ಸಭೆ ನಡೆಸಿ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಸೋಲಾರಗೊಪ್ಪ ಮಾತನಾಡಿ, ರವಿ ಬೆಳಗೆರೆ ಅವರು ಲಕ್ಷಾಂತರ ಜನರಿಗೆ ಸ್ಪೂರ್ತಿಯ ಸೆಲೆಯಾಗಿದ್ದರು. ಅವರ ಬರವಣಿಗೆಯಿಂದಲೇ ನೂರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಇಂತವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ ಎಂದರು.
ಮಾಧ್ಯಮ ಲೋಕಕ್ಕೆ ಅವರ ಕೊಡುಗೆ ಅಪಾರ. ನೂರಾರೂ ಪತ್ರಕರ್ತರು ಅವರಂತೆ ಆಗಬೇಕೆಂದು ಅಂದುಕೊಂಡಿದ್ದಾರೆ. ಆದರೆ, ಅವರಂತೆ ಆಗಲು ಯಾರಿಂದಲೂ ಸಾಧ್ಯವಿಲ್ಲ. ರವಿ ಬೆಳಗೆರೆಯವರು ನಮ್ಮಿಂದ ದೂರವಾಗಿದ್ದಾರಷ್ಟೇ. ಅವರ ಬರವಣಿಗೆ ನಮ್ಮೊಂದಿಗೆ ಸದಾಕಾಲ ಇರತ್ತೆ ಎಂದು ರಮೇಶ ಹೇಳಿದರು.
ಕಲ್ಲಪ್ಪ ಮಿರ್ಜಿ, ಪ್ರಭಾಕರ ನಾಯಕ್, ರವಿ ಬಡಿಗೇರ್, ಮಲ್ಲಿಕಾರ್ಜುನ ಪುರದನಗೌಡ್ರ, ಉಮೇಶ ಜೋಶಿ, ಉದಯ ಗೌಡರ, ಶಶಿ ಕಟ್ಟಿಮನಿ, ಸುಭಾಸ ಸುಣಗಾರ, ಪ್ರಕಾಶ ಲಮಾಣಿ, ಅಶೋಕ ಅರ್ಕಸಾಲಿ, ನಾಗಣ್ಣ ಗೌಳಿ ಉಪಸ್ಥಿತರಿದ್ದರು.