Posts Slider

Karnataka Voice

Latest Kannada News

ರಾಯಚೂರಿಗೆ ಕಂಟಕವಾಗಿದ್ದ ಚೋರರನ್ನ ಹಿಡಿದಿದ್ದು ಯಾವ ಠಾಣೆ ಪೊಲೀಸರು ಗೊತ್ತಾ..?

1 min read
Spread the love

ರಾಯಚೂರು: ಜಿಲ್ಲೆಯಲ್ಲಿ ಕಳ್ಳತನದ ಮೂಲಕವೇ ಪೊಲೀಸರಿಗೆ ತಲೆ ನೋವಾಗಿದ್ದ ರಾತ್ರಿಕಳ್ಳರನ್ನ ಬಂಧಿಸುವಲ್ಲಿ ರಾಯಚೂರು ಜಿಲ್ಲೆಯ ಮಾನವಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿನ ತಲೆ ನೋವು ಕಡಿಮೆಯಾದಂತಾಗಿದೆ.

ಬಂಧಿತರು ಜಿಲ್ಲೆಯ ವಿವಿಧೆಡೆ ಎಟಿಎಂ, ಬ್ಯಾಂಕ್ , ಮನೆ ಕಳ್ಳತನ ಮಾಡುತ್ತಿದ್ದವರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನಾಲ್ವರನ್ನ ಬಂಧಿಸುವಲ್ಲಿ ಯಶ ಸಾಧಿಸಿದ್ದಾರೆ. ಸಿರವಾರ, ರಾಯಚೂರು, ಮಾನವಿಯಲ್ಲಿ ಬ್ಯಾಂಕ್, ಮಾನವಿಯಲ್ಲಿ ಮನೆ ಕಳ್ಳತನ ಪ್ರಕರಣಗಳ ವರದಿಯಾಗಿದ್ದವು. ಹಿರೇಕೋಟ್ನೆಕಲ್ ನಲ್ಲಿ ಬ್ಯಾಂಕ್ ಕಳ್ಳತನ ಸಂದರ್ಭದಲ್ಲಿ ಒಬ್ಬ ಪೊಲೀಸರಿಗೆ ಸಿಕ್ಕಿದ್ದ. ಆತನ ವಿಚಾರಣೆಯಿಂದ ಮತ್ತೆ ಮೂವರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ವೀರೇಶ ಎಂಬ ಕಳ್ಳ ಸಿಕ್ಕಿದ್ದು ನಂತರ ಜಾವೇದ್, ಅಬ್ಬಾಸ್ ಹಾಗೂ ಜಬ್ಬಾರ್ ಎಂಬ ನಾಲ್ಕು ಜನರನ್ನ ಬಂಧನ ಮಾಡಲಾಗಿದೆ. ಬಂಧಿತರಿಂದ 1 ಸ್ಕೂಟರ್, 1 ಬೈಕ್, 80 ಗ್ರಾಂ ಚಿನ್ನ 15000 ನಗದು ಸೇರಿ ಒಟ್ಟು 3.39 ಲಕ್ಷ ರೂಪಾಯಿ ಮೌಲ್ಯ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

ಜಿಲ್ಲೆಯ ಪೊಲೀಸರಿಗೂ ಹಾಗೂ ಬ್ಯಾಂಕ್ ಸಿಬ್ಬಂದಿಗಳಿಗೆ ತಲೆ ನೋವಾಗಿದ್ದ ಆರೋಪಿಗಳಿಗೆ ಹೆಡಮುರಿಗೆ ಕಟ್ಟುವಲ್ಲಿ ಮಾನವಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *