ಧಾರವಾಡದಲ್ಲಿ ಪೊಲೀಸ್ ಕಾನ್ಸಟೇಬಲ್ ಸಾವು
1 min read
ಧಾರವಾಡ: ಕಳೆದ ಮೂರು ದಿನದ ಹಿಂದಷ್ಟೇ ತೀವ್ರವಾಗಿ ಅನಾರೋಗ್ಯಕ್ಕೀಡಾದ ವಿದ್ಯಾಗಿರಿ ಠಾಣೆಯ ಪೊಲೀಸ್ ಕಾನ್ಸಟೇಬಲ್ ರೋರ್ವರು ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ.
ಮೂರು ದಿನದ ಹಿಂದೆ ಕರ್ತವ್ಯ ನಿರ್ವಹಿಸಿ ಧಾರವಾಡದ ಕ್ಲಬನಲ್ಲಿ ಅರಾಮ ಪಡೆಯುತ್ತಿದ್ದ ವೇಳೆಯಲ್ಲಿ ಸಡನ್ನಾಗಿ ಲೋ ಬಿಪಿಯಿಂದ ಬಳಲಿಕೆಗೊಂಡಿದ್ದರು. ತಕ್ಷಣವೇ ಅವರನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ ಪಾಟೀಲ ಎಂಬುವವರೇ ನಿಧನರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಪೊಲೀಸ್ ಇಲಾಖೆಗೆ ಸೇರುವ ಮುನ್ನ ಹದಿನೈದು ವರ್ಷ ಸೇನೆಯಲ್ಲಿ ಬಸವರಾಜ ಸೇವೆ ಸಲ್ಲಿಸಿ ಬಂದಿದ್ದರು.
ಮೂಲತಃ ಗೋಕಾಕದ ಬಸವರಾಜ ಪಾಟೀಲ, ಕರ್ತವ್ಯದ ಜೊತೆಗೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಅಗಲಿಕೆ ಇಲಾಖೆಯಲ್ಲಿ ನೀರವಮೌನ ಮೂಡಿಸಿದೆ.