ಇಂದಿನಿಂದಲ್ಲಾ ನೈಟ್ ಕರ್ಫ್ಯೂ.. ನಾಳೆಯಿಂದ: ಸಿಎಂ ಟ್ವೀಟ್
1 min read
ಬೆಂಗಳೂರು: ಕೊರೋನಾ ರೂಪಾಂತರ ವೈರಾಣು ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ಇಂದು ರಾತ್ರಿಯಿಂದ ಜನವರಿ 2 ರವರೆಗೆ ರಾಜ್ಯಾಧ್ಯತ ರಾತ್ರಿ 10 ರಿಂದ 2 ರವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದರು, ಇದಾದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿದ್ದು, ನಾಳೆಯಿಂದ ಕರ್ಪ್ಯೂ ಜಾರಿಗೆ ಬರಲಿದೆ ಎಂದಿದ್ದಾರೆ.
ಕೋವಿಡ್ ಸಲಹಾ ಸಮಿತಿ ಶಿಫಾರಸ್ಸುಗಳ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಿದ್ದರು. ನಂತರ ರಾಜ್ಯಾಧ್ಯತ ನೈಟ್ ಕರ್ಫ್ಯೂ ಜಾರಿಗೊಳಿಸುವ ಶಿಫಾರಸ್ಸಿಗೆ ಸಮ್ಮತಿ ನೀಡಿ ಇಂದಿನಿಂದಲೇ ನೈಟ್ ಕರ್ಫ್ಯೂಗೆ ಆದೇಶ ನೀಡಿದ್ದರು.
ಸಭೆಯ ನಂತರ ಸುದ್ದಿಗಾರೊಂದಿಗೆ ಮಾತನಾಡಿದ್ದ ಸಿಎಂ ಯಡಿಯೂರಪ್ಪ, ಕೋವಿಡ್ ಸಲಹಾ ಸಮಿತಿ ಶಿಫಾರಸ್ಸು ಪ್ರಕಾರ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ರಾತ್ರಿ 10 ರ ನಂತರ ಮನೆಯಿಂದ ಹೊರಬರುವಂತಿಲ್ಲ. ಆದರೆ, ತುರ್ತು ಸೇವೆಗೆ ಮಾತ್ರ ಇದರಿಂದ ವಿನಾಯಿತಿ ಇದೆ ಅನಗತ್ಯವಾಗಿ ಯಾರೂ ರಾತ್ರಿ ಹೊರಗೆ ಬರಬಾರದು, ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.
ನೈಟ್ ಕರ್ಫ್ಯೂಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ನಿಗದಿಯಾಗಿರುವಂತೆ ಶಾಲಾ ಕಾಲೇಜು ಜನವರಿ 1 ರಿಂದ ಆರಂಭವಾಗಲಿದೆ ಅಗತ್ಯವಿದ್ದಲ್ಲಿ ಮಾತ್ರ ಮುಂದಿನ ಬೆಳವಣಿಗೆ ನೋಡಿ ನಿರ್ಧಾರ ಪರಿಶೀಲನೆ ಮಾಡಲಿದ್ದೇವೆ ಎಂದು ಹೇಳಿದ್ದರು ಕೂಡಾ, ಮತ್ತೆ ಟ್ವೀಟ್ ಮಾಡಿ, ಇಂದಿನಿಂದ ಜಾರಿಗೆ ಆಗುವುದಿಲ್ಲ. ನಾಳೆಯಿಂದ ನೈಟ್ ಕರ್ಪ್ಯೂ ಆರಂಭವಾಗಲಿದೆ ಎಂದಿದ್ದಾರೆ.