ನೈಟ್ ಕರ್ಪ್ಯೂ ವಾಪಾಸ್ ಪಡೆದ ರಾಜ್ಯ ಸರಕಾರ
1 min read
ಬೆಂಗಳೂರು: ಕೊರೋನಾ ಮಹಾಮಾರಿಯ ಮತ್ತೆ ಹೆಚ್ಚಾಗುತ್ತಿದೆ ಎಂದುಕೊಂಡು ಇಂದಿನಿಂದ ನೈಟ್ ಕರ್ಪ್ಯೂ ಮಾಡಲು ಮುಂದಾಗಿದ್ದ ರಾಜ್ಯ ಸರಕಾರ, ಅದನ್ನ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಕೋವಿಡ್-19 ಹೆಚ್ಚಾಗುವ ಆತಂಕದಲ್ಲಿ ನಿನ್ನೆಯಿಂದಲೇ ನೈಟ್ ಕರ್ಪ್ಯೂ ಮಾಡುತ್ತೇವೆ ಎಂದು ಹೇಳಿಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಇಂದಿನಿಂದ ಮಾಡುವುದಾಗಿ ಟ್ವೀಟ್ ಮಾಡಿದ್ದರು. ಈಗ ಆದೇಶವನ್ನ ಮರಳಿ ಪಡೆದಿದ್ದು, ಯಾವುದೇ ರೀತಿಯ ಕರ್ಪ್ಯೂ ಇರುವುದಿಲ್ಲ.
ಕೊರೋನಾ ಹಿನ್ನೆಲೆಯಲ್ಲಿ ನಿನ್ನೆ ಮಹತ್ವದ ಸಭೆ ನಡೆಸಿದ್ದ ಸಿಎಂ ಯಡಿಯೂರಪ್ಪ, ರಾತ್ರಿ 11ಗಂಟೆಯಿಂದ ಬೆಳಗಿನ ಜಾವ ಐದು ಗಂಟೆಯವರೆಗೆ ನೈಟ್ ಕರ್ಪ್ಯೂ ಮಾಡುವುದಾಗಿ ಘೋಷಣೆ ಮಾಡಿದ್ದರು. ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದಲೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಸರಕಾರ ಹೇಳಿತ್ತು. ಆದರೆ, ಅದನ್ನ ಪ್ರಶ್ನಿಸಿ ಹಲವರು ವ್ಯಂಗ್ಯ ಮಾಡಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವರು ವಿರೋಧ ಮಾಡಿದ್ದರು. ರಾತ್ರಿಯಷ್ಟೇ ಕೊರೋನಾ ಬರತ್ತೆ ಎಂದು ಕೇಳಿದ್ದರು. ಸರಕಾರ ಇದೀಗ ಮತ್ತೆ ನೈಟ್ ಕರ್ಪ್ಯೂವನ್ನ ಜಾರಿಗೆ ಆದೇಶ ಮಾಡಿ ಮತ್ತೆ ಹಿಂದೆ ಪಡೆದು ಸುಖಾಸುಮ್ಮನೆ ಗೊಂದಲವುಂಟು ಮಾಡುತ್ತಿದೆ.