Posts Slider

Karnataka Voice

Latest Kannada News

ನಡು ಬೀದಿಯಲ್ಲೇ ರೌಡಿ ಷೀಟರ್ ಕೊಲೆ- ಪೊಲೀಸರ ಲಘು ಲಾಠಿ ಪ್ರಹಾರ

1 min read
Spread the love

ಬೆಳಗಾವಿ: ಒಬ್ಬಂಟಿಯಾಗಿ ನಿಂತಿದ್ದ ರೌಡಿ ಷೀಟರನ ಮೇಲೆ ಹಲವರು ದಾಳಿ ಮಾಡಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದ್ದು, ಕೊಲೆಯ ಸುದ್ದಿ ಹರಡುತ್ತಿದ್ದಂತೆ ಆಸ್ಪತ್ರೆಯ ಬಳಿ ಸೇರಿದ್ದ ಜನರನ್ನ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆ ಕುಂದಾನಗರಿಯಲ್ಲಿ ಸಂಭವಿಸಿದೆ.

ರೌಡಿ ಷೀಟರ್ ಶಹಬಾಜ ಎಂಬಾತನನ್ನೇ ಕೊಲೆ ಮಾಡಿರುವ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹತ್ತಕ್ಕೂ ಹೆಚ್ಚು ಕಡೆ ಇರಿದು ಪರಾರಿಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದವನನ್ನ ಆಸ್ಪತ್ರೆಗೆ ದಾಖಲಿಸುವಾಗ ಸಾವಿಗೀಡಾಗಿದ್ದಾನೆ.

ಬೆಳಗಾವಿ ನಗರದ ಶೇಖ್ ಆಸ್ಪತ್ರೆಯ ಬಳಿ ಘಟನೆ ಸಂಭವಿಸಿದ್ದು, ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲವಾದರೂ, ಇಂತನೊಂದಿಗೆ ಹಲವರು ಶತ್ರುತ್ವ ಹೊಂದಿದ್ದರು. ಸಣ್ಣ ಪುಟ್ಟ ಗೊಂದಲಗಳಲ್ಲಿ ಶಹಬಾಜ್ ಭಾಗಿಯಾಗುತ್ತಿದ್ದ ಎಂದು ಹೇಳಲಾಗಿದೆ.

ಶಹಬಾಜ್ ಸಾವಿನ ಸುದ್ಧಿ ಹರಡುತ್ತಿದ್ದಂತೆಯೇ ಜಿಲ್ಲಾ ಆಸ್ಪತ್ರೆಯ ಬಳಿ ನೂರಾರು ಯುವಕರು ಸೇರಿದ್ದರು, ಪೋಲೀಸರು ಯುವಕರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ಬಳಿ ಬಿಗಿ ಪೋಲೀಸ್ ಬಂದೋಬಸ್ತ ನಿಯೋಜನೆ ಮಾಡಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಾ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.


Spread the love

Leave a Reply

Your email address will not be published. Required fields are marked *