ನವಲಗುಂದ ಠಾಣೆ ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿಯವರಿಗೆ ಮುಖ್ಯಮಂತ್ರಿ ಪದಕ

ಧಾರವಾಡ: ಜಿಲ್ಲೆಯ ನವಲಗುಂದ ಠಾಣೆಯ ವೃತ್ತ ನಿರೀಕ್ಷಕರಾಗಿರುವ ಚಂದ್ರಶೇಖರ ಮಠಪತಿಯವರಿಗೆ ಮುಖ್ಯಮಂತ್ರಿಗಳ ಪದಕ ಲಭಿಸಿದ್ದು, ಇಲಾಖೆಯಲ್ಲಿನ ಅವರ ಸೇವೆಯನ್ನ ಪರಿಗಣಿಸಿದಂತಾಗಿದೆ.
ಇಂದು ರಾಜಧಾನಿಯಲ್ಲಿ ಪದಕವನ್ನ ಪಡೆದ ಚಂದ್ರಶೇಖರ ಮಠಪತಿ ಬಾಗಲಕೋಟೆಯಲ್ಲಿದ್ದಾಗ ಸಲ್ಲಿಸಿದ ಸೇವೆಯನ್ನ ಪರಿಗಣನೆ ಮಾಡಿ, ಈ ಪದಕವನ್ನ ನೀಡಲಾಗಿದೆ. ಇಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಸಮ್ಮುಖದಲ್ಲಿ ಪದಕವನ್ನ ಪಡೆದರು.
ನವಲಗುಂದ ಠಾಣೆಯಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಬಂದಿರುವ ಚಂದ್ರಶೇಖರ ಮಠಪತಿ ಅವರಿಗೆ ಮುಖ್ಯಮಂತ್ರಿಗಳ ಪದಕ ಸಿಕ್ಕಿರುವುದನ್ನ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.
ಇಲಾಖೆಯಲ್ಲಿ ತಮ್ಮ ಕಾರ್ಯ ಮತ್ತಷ್ಟು ಗುರುತಿಸುವ ಹಾಗಾಗಲಿ ಎಂದು ಬಯಸಿರುವ ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಮಠಪತಿಯವರ ಕಾರ್ಯಧಕ್ಷತೆಯನ್ನ ಕೊಂಡಾಡಿದ್ದಾರೆ.