ಮಗುವಿಗೆ ಜನ್ಮ ನೀಡಿದ ನಾಲ್ಕೇ ತಿಂಗಳಲ್ಲಿ ಪತಿಯನ್ನ ಮಸಣಕ್ಕೆ ಕಳಿಸಿದ ಮಸಣದ ಹೂ…

ಹುಬ್ಬಳ್ಳಿ: ತನ್ನ ಗಂಡನ ಕೊಲೆ ಮಾಡುವಲ್ಲಿ ಸತಿಯೇ ಮಹತ್ವದ ಪಾತ್ರ ವಹಿಸಿ, ತನ್ನ ಹಳೆಯ ಗೆಳೆಯನೊಂದಿಗೆ ಕಳಿಸಿ ಕೊಲೆ ಮಾಡಿಸಿರುವ ಪ್ರಕರಣವನ್ನ ಪತ್ತೆ ಮಾಡವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಅಕ್ಷತಾ, ಹಾನಗಲ್ ಪಟ್ಟಣದ ಜಗದೀಶ ಸೊಲ್ಲಾಪುರ ಎಂಬಾತನ ಜೊತೆ ಮದುವೆಯಾಗಿದ್ದಳು. ಆದರೆ, ತನ್ನದೇ ಗ್ರಾಮದ ಕಾಶಪ್ಪ ಎನ್ನುವನೊಂದಿಗೆ ಸಂಪರ್ಕ ಹೊಂದಿದ್ದಳು. ಇದೇ ನೆಪ ಮಾಡಿಕೊಂಡು ಕಾಶಪ್ಪ ಹಾಗೂ ಅಕ್ಷತಾ ಪ್ಲಾನ್ ರೂಪಿಸಿ ಕೊಲೆ ಮಾಡಿದ್ದಾರೆ.
ತಾನೂ ಮನೆಯಲ್ಲೇ ಇದ್ದು ಕಾಶಪ್ಪನೊಂದಿಗೆ ಪತಿ ಜಗದೀಶನನ್ನ ಕಳಿಸಿದ್ದು, ಕಾಶಪ್ಪ ಜಗದೀಶನಿಗೆ ಕುಡಿಸಿ ಕೊಲೆ ಮಾಡಿದ್ದಾನೆ.
ಈ ಪ್ರಕರಣವನ್ನ ಭೇದಿಸುವಲ್ಲಿ ಯಶಸ್ವಿಯಾದ ಇನ್ಸಪೆಕ್ಟರ್ ರಮೇಶ ಗೋಕಾಕ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅಭಿನಂದಿಸಿದ್ದಾರೆ.
ತನ್ನ ನಾಲ್ಕು ತಿಂಗಳ ಮಗುವನ್ನ ಅನಾಥ ಮಾಡಿದ ಅಕ್ಷತಾ, ತನ್ನ ಹಳೆ ಜೊತೆಗಾರನೊಂದಿಗೆ ಜೈಲುಪಾಲಾಗಿದ್ದಾಳೆ. ಎಲ್ಲವೂ ವಿಧಿಯಾಟ..