ಮನೆ ಕಳ್ಳತನ ಮಾಡಿದ್ದ 48 ಗಂಟೆಯಲ್ಲೇ ಆರೋಪಿಗಳ ಹೆಡಮುರಿಗೆ ಕಟ್ಟಿದ ಗೋಕುಲ ಠಾಣೆ ಪೊಲೀಸರು
1 min read
ಹುಬ್ಬಳ್ಳಿ: ಮಾಲೀಕರು ಮನೆಗಳಿಗೆ ಕೀಲಿ ಹಾಕಿ ಹೋಗಿದ್ದನ್ನ ಗಮನಿಸಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧನ ಮಾಡುವಲ್ಲಿ ಗೋಕುಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ಸೆಂಟ್ರಲ್ ಎಕ್ಸೈಜ್ ಕಾಲೋನಿಯ ಪೂನಮ ಪವಾರ ಹಾಗೂ ಸಿಲ್ವರ ಟೌನ್ ನಿವಾಸಿಯಾಗಿರುವ ಅವಿನಾಶ ಗೌಡರ ಮನೆಗಳು ಕಳ್ಳತನವಾಗಿದ್ದರ ಬಗ್ಗೆ ದೂರನ್ನ ದಾಖಲಿಸಿಕೊಂಡು ಗೋಕುಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಆರೋಪಿಗಳು ಒಂದೇ ಪ್ರದೇಶದವರಾಗಿದ್ದು ಮೂವರು ಕೂಡಾ ರಾಮಲಿಂಗೇಶ್ವರನಗರದ ನಿವಾಸಿಗಳಾಗಿದ್ದಾರೆ. ಬಂಧಿತರನ್ನ ಪ್ರೇಮಕುಮಾರ ಭೀಮಪ್ಪ ಪೂಜಾರ, ವೀರೇಶ ಜಂಬುನಾಥ ಕಾಂಬಳೆ ಹಾಗೂ ರಾಘವೇಂದ್ರ ಮಲ್ಲಪ್ಪ ಸಲಗಾರ ಎಂದು ಗುರುತಿಸಲಾಗಿದೆ. ಬಂಧಿತರಿಂದ ಹೊಂಡಾ ಆಕ್ಟಿವಾ ವಾಹನ, ಲ್ಯಾಪಟಾಪ್, ಎಲ್ಇಡಿ ಟಿವಿ ಹಾಗೂ ಬೆಳ್ಳಿಯ ಆಭರಣಗಳನ್ನ ವಶಕ್ಕೆ ಪಡೆಯಲಾಗಿದೆ.
ಗೋಕುಲ ಠಾಣೆ ಇನ್ಸಪೆಕ್ಟರ್ ನಾಗರಾಜ ಕಮ್ಮಾರ ನೇತೃತ್ವದಲ್ಲಿ ಎಎಸ್ಐ ಎಂ.ಎಚ್.ಮೂಗನೂರ, ಸಿಬ್ಬಂದಿಗಳಾದ ಬಸವರಾಜ ಬೆಳಗಾವಿ, ಮಹಾದೇವ ಹೊನ್ನಪ್ಪನವರ, ಕೆ.ಎಚ್.ನೀಲಪ್ಪಗೌಡ, ಸಂಜೀವರೆಡ್ಡಿ ಕಣಬುರ ಹಾಗೂ ವಿಜಯಕುಮಾರ ಹಕಾಟೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.