ಕಟ್ಕ್ ರೊಟ್ಟಿ-ಪುಂಡಿ ಪಲ್ಯೆ- ಸವಿದ ಶೆಟ್ಟರ ಸಹೋದರರು: ಆತ್ಮೀಯತೆ ಮೂಡಿಸುವ ಸೀಗಿ ಹುಣ್ಣಿಮೆ
1 min read
ಹುಬ್ಬಳ್ಳಿ: ಪರಂಪರೆಯನ್ನ ಉಳಿಸಿಕೊಂಡು ಹೋಗುವ ಮತ್ತೂ ಆತ್ಮಯತೆಯನ್ನ ಹೆಚ್ಚಿಸುವ ಸೀಗೆ ಹುಣ್ಣಿಮೆಯಲ್ಲಿಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಚಿವ ಜಗದೀಶ ಶೆಟ್ಟರ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಭಾಗವಹಿಸಿ, ಸಂಪ್ರದಾಯವನ್ನ ಮುಂದುವರೆಸಿದರು.
ಅಮರಗೋಳದ ಪಾಲಿಕೆಯ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ ಅವರ ಹೊಲಕ್ಕೆ ಬಂದ ಜಗದೀಶ ಶೆಟ್ಟರ ಮತ್ತು ಪ್ರದೀಪ ಶೆಟ್ಟರ, ಕಟ್ಕ್ ರೊಟ್ಟಿ, ಪುಂಡಿ ಪಲ್ಯೆಯನ್ನ ಸವಿದರು. ಸೀಗೆ ಹುಣ್ಣಿಮೆಯಲ್ಲಿ ಭಾಗವಹಿಸಿ, ಹಲವು ವಿಧದ ಸಿಹಿ ತಿನಿಸುಗಳನ್ನ ಸವಿದರು.
ಈ ಸಮಯದಲ್ಲಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ, ಹೊರಕೇರಿಯವರು ಪ್ರೀತಿಯಿಂದ ಕರೆದಿದ್ದರಿಂದ ಬಂದು ಸೀಗೆ ಹುಣ್ಣಿಮೆಯಲ್ಲಿ ಹಲವು ಖಾಧ್ಯಗಳನ್ನ ಸ್ವೀಕರಿಸಿದ್ದೇನೆ. ಸಾಕಷ್ಟು ಖುಷಿಯಾಗುತ್ತದೆ. ನಮ್ಮ ಸಂಪ್ರದಾಯ ಉಳಿಸಿಕೊಂಡು ಹೋಗುವುದೇ ಇಂತಹ ಕಾರ್ಯಕ್ರಮಗಳು ಎಂದರು.
ಹುಡಾ ಅಧ್ಯಕ್ಷ ನಾಗೋಸಾ ಕಲಬುರ್ಗಿ, ಅಜ್ಜಪ್ಪ ಹೊರಕೇರಿ ಹಾಗೂ ಅವರ ಪುತ್ರ ಮಲ್ಲಿಕಾರ್ಜುನ ಹೊರಕೇರಿ ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಕೆಲಕಾಲ ಸಚಿವರು, ಗಾಳಿಪಟವನ್ನ ಹಾರಿಸಿ ಸಂತಸಪಟ್ಟರು.