ಪತಿ ವಿರುದ್ಧ ಐಪಿಎಸ್ ವರ್ತಿಕಾ ಕಟಿಯಾರ್ ದೂರು..!
1 min readಬೆಂಗಳೂರು: ಕಳೆದ 10 ವರ್ಷದ ಹಿಂದೆ ಮದುವೆಯಾಗಿರುವ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ತಮ್ಮ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆಂದು ತಿಳಿದು ಬಂದಿದೆ.
ವರ್ತಿಕಾ ಕಟಿಯಾರ್ ಅವರ ಪತಿ ನಿತೀನ್ ಸುಭಾಶ ಮತ್ತು ಅವರ ಕುಟುಂಬದ ಏಳು ಜನರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. 2011ರಲ್ಲಿ ವಿವಾಹವಾಗಿದ್ದ ವರ್ತಿಕಾ ಕಟಿಯಾರ್ ಅವರು 2009 ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಭಾರತೀಯ ವಿದೇಶಾಂಗ ಸೇವೆ (ಐಎಫ್ ಎಸ್) ಅಧಿಕಾರಿಯಾಗಿರುವ ನಿತೀನ್, ಕೆಲ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಪತಿಗೆ ಕುಡಿಯುವ ಮತ್ತು ಧೂಮಪಾನ ಮಾಡುವ ಅತಿಯಾದ ಚಟವಿದೆ. ಇದನ್ನ ಬಿಡುವಂತೆ ಹಲವು ಬಾರಿ ಹೇಳಿದಾಗಳು, ಜಗಳ ಮಾಡಿ ಹಲ್ಲೆ ಮಾಡಿದ್ದಾರೆ. 2016ರಲ್ಲಿ ಇದೇ ವಿಚಾರಕ್ಕೆ ಹಲ್ಲೆ ಮಾಡಿದಾಗ ಕೈ ಮುರಿದಿತ್ತೇಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರಂತೆ.
ದೀಪಾವಳಿಗೆ ಉಡುಗೊರೆ ನೀಡಲಿಲ್ಲವೆಂದು ವಿಚ್ಚೇದನಕ್ಕೆ ಬೆದರಿಕೆ ಜಾಕಿದ್ದರು. ಮದುವೆಯ ಸಮಯದಲ್ಲೂ ಚಿನ್ನಾಭರಣ ಪಡೆದಿದ್ದಾರೆ. ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದಾರೆ. ತಮ್ಮ ಅಜ್ಜಿಯ ಬಳಿ 5 ಲಕ್ಷ ಪಡೆದಿದ್ದ ಪತಿ, ಮನೆ ಮಾಡುವಾಗ 35 ಲಕ್ಷ ಹಣ ಪಡೆದಿದ್ದರೆಂದು ದೂರಿನಲ್ಲಿ ವರ್ತಿಕಾ ಕಟಿಯಾರ ವಿವರಿಸಿದ್ದಾರಂತೆ.
ವರದಕ್ಷಿಣೆ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಕಬ್ಬನ್ ಪಾರ್ಕನಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆಯಂತೆ.