ಶೇಖರಣೆ ಮಾಡಿದ ಮರಳು ಅಡ್ಡೆ ಮೇಲೆ ದಾಳಿ: 30 ಲಾರಿಗೂ ಹೆಚ್ಚು ‘ಉಸುಕು’ ಸುಪರ್ಧಿಗೆ
1 min read
ಹುಬ್ಬಳ್ಳಿ: ಅನಧಿಕೃತವಾಗಿ ಶೇಖರಣೆ ಮಾಡಿದ ಮರಳು ಅಡ್ಡೆಯ ಮೇಲೆ ದಾಳಿ ಮಾಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು 30 ಲಾರಿಗೂ ಹೆಚ್ಚು ಮರಳನ್ನ ವಶಕ್ಕೆ ಪಡೆದಿದ್ದಾರೆ.
ಗಬ್ಬೂರು ಬೈಪಾಸ್ ಬಳಿಯ ಖಾಲಿ ಜಾಗೆಯಲ್ಲಿ ಶೇಖರಣೆ ಮಾಡಿದ್ದ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ಮರಳನ್ನ ಅಧಿಕಾರಿಗಳು ಪತ್ತೆ ಹಚ್ಚಿ ಜಪ್ತಿ ಮಾಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿಯನ್ನ ನೀಡಲಿದ್ದಾರೆ.
ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಯನ್ನ ಹತ್ತಿಕ್ಕಲು ಪೊಲೀಸರು ಕಠಿಣ ಕ್ರಮವನ್ನ ಜರುಗಿಸುತ್ತಿದ್ದಂತೆ ಎಚ್ಚೆತ್ತಿರುವ, ಗಣಿ, ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಾವೇ ಬಂದು, ಅನಧಿಕೃತವಾಗಿ ಶೇಖರಣೆ ಮಾಡಿರುವ ಅಡ್ಡೆಯ ಮೇಲೆ ದಾಳಿ ಮಾಡಿದ್ರು.
ಬೈಪಾಸ್ ಬಳಿ ಪ್ರಮುಖರೊಬ್ಬರು ಶೇಖರಣೆ ಮಾಡಿ, ನಂತರ ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲ, ಈ ಪ್ರಮಾಣದಲ್ಲಿ ಮರಳನ್ನ ಶೇಖರಣೆ ಮಾಡುವುದು ಕೂಡಾ ಕಾನೂನು ಉಲ್ಲಂಘನೆಯಾಗಿದೆ.
ಪೊಲೀಸರೊಂದಿಗೆ ಮಾಹಿತಿಯನ್ನ ಕಲೆ ಹಾಕಿರುವ ಅಧಿಕಾರಿಗಳು, ಅಡ್ಡೆಯಲ್ಲಿರುವ ಮರಳಿನ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿಯನ್ನ ನೀಡಲಿದ್ದಾರಂತೆ.