ಹುಬ್ಬಳ್ಳಿಯ ಜಂಟಲ್ ಮನ್ ಪೊಲೀಸ್ ರಾಜು
1 min read
ಹುಬ್ಬಳ್ಳಿ: ಸಾರ್ವಜನಿಕರೊಂದಿಗೆ ನಿರಂತರವಾಗಿ ಬೆರೆತು ಕರ್ತವ್ಯ ನಿರ್ವಹಣೆ ಮಾಡುತ್ತಿರುವಾಗಲೂ ಪ್ರಾಣಿಗಳ ಮೇಲಿನ ಪ್ರೀತಿ ಕಡಿಮೆಯಾಗುವುದು ಕಷ್ಟಸಾಧ್ಯ. ಹಾಗಾಗಿಯೇ, ಪ್ರಾಣಿ ಪ್ರಿಯ ಪೊಲೀಸ್ ಪೇದೆಯೋರ್ವ ಕರ್ತವ್ಯ ನಿರ್ವಹಿಸುತ್ತಲೇ ಶ್ವಾನದೊಂದಿಗೆ ಸಮಯ ಕಳೆದಿರುವ ವೀಡಿಯೋ ವೈರಲ್ ಆಗಿದ್ದು, ಪೊಲೀಸಪ್ಪನ ನಾಯಿ ಪ್ರೀತಿ ಎಲ್ಲರನ್ನೂ ಸೆಳೆಯುತ್ತಿದೆ.
ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸರೊಬ್ಬರು ತಮ್ಮ ಕರ್ತವ್ಯದ ನಡುವೇ ಕೂಡಾ ಬೀದಿ ನಾಯಿಗಳಿಗೆ ಬಿಸ್ಕಿತ್ತ ಗಳನ್ನು ಹಾಕುವುದರ ಮೂಲಕ ಮಾನವೀಯತೆ ತೋರಿದ್ದಾರೆ.
ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ರಾಜು ಕೊರಗು ಎನ್ನುವ ಪೊಲೀಸ್ ಪೇದೆ ಬೀದಿ ಬದಿಯ ನಾಯಿಗಳಿಗೆ ತಮ್ಮ ಕರ್ತವ್ಯದ ಸಮಯದಲ್ಲಿ ಚೆನ್ನಮ್ಮ ಸರ್ಕಲ್ ಬಳಿಯಲ್ಲಿರುವ ನಾಯಿಗಳಿಗೆ ಈ ರೀತಿಯಾಗಿ ಬಿಸ್ಕಿಟ್ಗಳನ್ನು ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ.
ಪೊಲೀಸ್ ರಾಜು ಅವರ ಶ್ವಾನ ಪ್ರೀತಿಯಿಂದ ಎಲ್ಲರೂ ಖುಷಿಗೊಂಡಿದ್ದಾರೆ. ನಂಬಿಕೆಯ ಪ್ರಾಣಿ ಶ್ವಾನಕ್ಕೆ ರಾಜು ಅವರ ಕೈ ಬಿಸ್ಕತ್ತು, ಇಷ್ಟವಾಗುತ್ತಿವೆ.