ಹುಬ್ಬಳ್ಳಿಯಲ್ಲಿ ಜಂಟಿ ನಿರ್ದೇಶಕರ ಮಿಂಚಿನ ಸಂಚಾರ
1 min read
ಹುಬ್ಬಳ್ಳಿ: ಉಪಹಾರ ಯೋಜನೆಯ ಜಂಟಿ ನಿರ್ದೇಕರು ಇಂದು ಹುಬ್ಬಳ್ಳಿಯ ವಿವಿಧ ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಿ, ಶಿಕ್ಷಕರು ಹಾಗೂ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನ ನೀಡಿದ್ರು.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಶಹರ ವಲಯದ ನಾಗಶೆಟ್ಟಿಕೊಪ್ಪದ ಸರಕಾರಿ ಪ್ರೌಢ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಶೆಟ್ಟಿಕೊಪ್ಪ, ವಿಶ್ವೇಶ್ವರನಗರದ ಸರಕಾರಿ ಪ್ರೌಢ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಭೇಟಿ ನೀಡಿದರು.
ವಿದ್ಯಾಗಮ 2, ಕೋವಿಡ್ ನಿಯಮ ಪಾಲನೆ, ದೂರದರ್ಶನ ಪಾಠಗಳು, ರೇಡಿಯೋ ಪಾಠ, ಆಹಾರ ಧಾನ್ಯಗಳ ವಿತರಣೆ, 55 ದಿನಗಳ ಆಹಾರ ಧಾನ್ಯಗಳ ವಿತರಣೆಯ ಪೂರ್ವ ತಯಾರಿ ಮತ್ತು ನೂತನ ಉಪಕ್ರಮಗಳ ಬಗ್ಗೆ ಚರ್ಚಿಸಿ, ಪರಿಶೀಲಿಸಿ ಮಾರ್ಗದರ್ಶನ ಮಾಡಿದರು.
ಧಾರವಾಡ ಡಯಟ್ ಪ್ರಾಚಾರ್ಯ ಖಾಜಿ, ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಬಸವರಾಜ ಮಾಯಾಚಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕುಮಾರ ಸಿಂದಗಿ, ಕ್ಷೇತ್ರ ಸಮನ್ವಯಾಧಿ ಎಂ.ಎಸ್.ಶಿವಳ್ಳಿಮಠ, ಸಹಾಯಕ ನಿರ್ದೇಶಕ ಶ್ರೀಧರ ಪತ್ತಾರ, ಎಂ.ಬಡಿಗೇರ, ಮುಖ್ಯಶಿಕ್ಷಕಿ ಡಿ.ಬಿ.ಕಮ್ಮಾರ, ಶಾಲಾ ಎಸ್.ಡಿ.ಎಂ.ಸಿ ಯವರು, ಶಾಲಾ ಸಿಬ್ಬಂದಿ ಮತ್ತು ಅಡುಗೆ ಸಹಾಯಕರು ಉಪಸ್ಥಿತರಿದ್ದರು.