Posts Slider

Karnataka Voice

Latest Kannada News

ಶಿಕ್ಷಕರ ಸಂಘಗಳು ಹೇಗಿರಬೇಕು ಅನ್ನೋದನ್ನ ಈ ಬಿಇಓ ಹೇಳಿದ್ದಾರೆ ನೋಡಿ.. ತಿಳಿಯಿರಿ..

1 min read
Spread the love

ತಿ.ನರಸೀಪುರ: ಯಾವುದೇ ಒಂದು ಗ್ರಾಮ ಅಭಿವೃದ್ಧಿ ಹೊಂದಬೇಕಾದರೆ ವಿದ್ಯೆಯಿಂದ ಮಾತ್ರ ಸಾಧ್ಯ. ಆದ್ದರಿಂದ, ಅದರ ಮಹತ್ವವನ್ನು ಅರಿತು ಶಿಕ್ಷಕರು ವಿದ್ಯೆಯಿಂದ ಯಾವ ಮಕ್ಕಳು  ದೂರ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಮರಿಸ್ವಾಮಿ ಶಿಕ್ಷಕರಿಗೆ ಕರೆ ನೀಡಿದರು.

ಪಟ್ಟಣದ ಗುರುಭವನದಲ್ಲಿ ಕರ್ನಾಟಕ ಸರ್ಕಾರಿ  ಗ್ರಾಮೀಣ  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶಿಕ್ಷಣ ನವ ಮಾರ್ಗವನ್ನು ಸೃಷ್ಟಿಸುತ್ತದೆ.  ಶಿಕ್ಷಣ ಜ್ಞಾನ ಕೌಶಲ್ಯ ಜನರ ಜೀವನದ ಭವಿಷ್ಯವನ್ನು ರೂಪಿಸುತ್ತದೆ. ಶಿಕ್ಷಕರ ಸಂಘ ತನ್ನದೇ ಆದ ಮೌಲ್ಯವನ್ನು ಹೊಂದಿದೆ ಸಂಘವನ್ನು ದುರುಪಯೋಗಪಡಿಸಿಕೊಳ್ಳದೆ ನೊಂದವರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕು. ಹಣಕಾಸಿನ ಬಗ್ಗೆ ವ್ಯತ್ಯಾಸವಾಗದಂತೆ ಸಂಘವನ್ನು ನಿರ್ವಹಣೆ ಮಾಡಿದಾಗ ಮಾತ್ರ ಸಂಘ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಮರಿಸ್ವಾಮಿಯವರು, ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳು ಹೆಚ್ಚು ಇರುತ್ತವೆ. ಅದನ್ನು ಅರಿತು ನಿರ್ವಹಣೆ ಮಾಡುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರಿ  ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಓ.ಟಿ.ನಾಗರಾಜು,  ಮಹಾಪೋಷಕ ಎಚ್,ಎನ್, ಮಹದೇವಪ್ಪ,  ಗೌರವಾಧ್ಯಕ್ಷ ಸಿದ್ದರಾಜು, ಅಧ್ಯಕ್ಷ    ಬಿ.ಎಸ್.ಮಹೇಶ್,  ಪ್ರಧಾನ ಕಾರ್ಯದರ್ಶಿಎಸ್. ಸೋಮಶೇಖರ್,  ಕಾರ್ಯಧ್ಯಕ್ಷ ಟಿಆರ್ ಶಿವು, ಕೋಶಾಧ್ಯಕ್ಷರು ರಮೇಶ್,  ಉಪಾಧ್ಯಕ್ಷ ರಾಧಾ ಸಿದ್ದಲಿಂಗಮ್ಮ, ಎಂ, ನಾಗೇಶ್ ಕುಮಾರ್,  ಸಹಕಾರ್ಯದರ್ಶಿ ಜನಾರ್ಧನ, ಮಹಾಲಕ್ಷ್ಮಿ, ರುದ್ರಸ್ವಾಮಿ, ಟಿ.ಎಂ. ಮೈತಿಲಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುಬ್ಬಶೆಟ್ಟಿ, ಎಂ, ರಾಮು, ಸುಬ್ಬಣ್ಣ, ಎಸ್.ವಿರೂಪಾಕ್ಷ ಸ್ವಾಮಿ, ಕೋಂಗಯ್ಯ, ಧರ್ಮೇಂದ್ರ ಪ್ರಸಾದ್, ಬಿ.ಕೇಶವ್, ಪರಮೇಶ್,  ಎಂ.ಎನ್. ಸೂರ್ಯಕುಮಾರ್, ಎಚ್.ಡಿ. ಮಾದಪ್ಪ, ಮಲ್ಲಣ್ಣ,  ಕುಮಾರ, ಪುಟ್ಟರಾಜು  ಇತರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed