ಇನ್ಸಪೆಕ್ಟರ್ ಮಹಾಂತೇಶ ಹೊಳಿ ನೇತೃತ್ವದಲ್ಲಿ ದಾಳಿ: 11 ಜನರ ಬಂಧನ
1 min read
ಹುಬ್ಬಳ್ಳಿ: ದೀಪಾವಳಿಯ ಸಮಯದಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದು, 11 ಜನರನ್ನ ಬಂಧನ ಮಾಡಿದ್ದು, ಇನ್ನೂ ಕೆಲವರಿದ್ದರೂ ಎಂಬ ಮಾಹಿತಿಯನ್ನ ಕಲೆ ಹಾಕಿದ್ದಾರೆ.
ಹುಬ್ಬಳ್ಳಿಯ ಕುಲಕರ್ಣಿ ಓಣಿಯಲ್ಲಿ ಇಸ್ಪೀಟ್ ಆಡುತ್ತಿದ್ದ 11 ಜನರನ್ನು ಬಂಧಿಸಿ, ಅವರಿಂದ ಸಾವಿರಾರೂ ರೂಪಾಯಿಗಳನ್ನ ವಶಕ್ಕೆ ಪಡೆದಿದ್ದು, ಜೂಜಾಟಕ್ಕೆ ಬಳಕೆಯಾಗುತ್ತಿದ್ದ ಇಸ್ಪೀಟ್ ಕಾರ್ಡಗಳನ್ನ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಘಂಟಿಕೇರಿಯ ದೇಸಾಯಿ ಓಣಿಯಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ಇನ್ಸ್ಪೆಕ್ಟರ್ ಮಹಾಂತೇಶ ಹೊಳಿ ನೇತೃತ್ವದಲ್ಲಿರುವ ಸಿಬ್ಬಂದಿಗಳು ದಾಳಿ ಮಾಡಿ, ಆರೋಪಿಗಳನ್ನ ಬಂಧಿಸಿದ್ದಾರೆ.
ಕುಲಕರ್ಣಿ ಓಣಿಯ ಮನೆಯೊಂದರಲ್ಲಿ 11 ಜನರು ಸೇರಿ ಇಸ್ಪೀಟ್ ಆಡುತ್ತಿದ್ದರು. ದೀಪಾವಳಿ ಸಮಯದಲ್ಲಿ ಪೊಲೀಸರು ಬರೋದಿಲ್ಲವೆಂದು ನಡೆಯುತ್ತಿದ್ದ ಜೂಜಾಟವನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 11 ಜನ ಬಂಧಿತರಿಂದ 6600 ನಗದನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.