ಕಾಡಲ್ಲಿಟ್ಟಿದ್ದ ಗೋವಾ ಮದ್ಯ ವಶ: ಹುಬ್ಬಳ್ಳಿ-ಧಾರವಾಡಕ್ಕೂ ಇಲ್ಲಿಂದಲೇ ಸಪ್ಲೈ..!
1 min read
ಕಾರವಾರ: ತಾಲೂಕಿನ ಮಾಜಾಳಿ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದ ಕಾರವಾರ ಅಬಕಾರಿ ತಂಡ ಅಡಗಿಸಿಡಲಾಗಿದ್ದ ಲಕ್ಷಾಂತರ ಗೋವಾ ಮದ್ಯವನ್ನ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಸ್ಥಳೀಯರ ಮಾಹಿತಿ ಮೇಲೆ ರಾತ್ರಿ ಸಮಯದಲ್ಲಿ ದಾಳಿ ನಡೆಸಿದ ಅಬಕಾರಿ ತಂಡ 1422.120 ಲೀಟರ್ ಗೋವಾ ಮದ್ಯ ಹಾಗೂ 288 ಲೀಟರ್ ಗೋವಾ ಬಿಯರ್ ವಶಕ್ಕೆ ಪಡೆದುಕೊಂಡಿದ್ದು ಅದರ ಒಟ್ಟು ಮೌಲ್ಯ 7ಲಕ್ಷ ಎಂದು ಅಂದಾಜಿಸಲಾಗಿದೆ.
ಗೋವಾದಿಂದ ತಂದು ಕಾರವಾರ ಅರಣ್ಯ ಪ್ರದೇಶದದಲ್ಲಿ ಅಡಗಿಸಿಟ್ಟು ರಾತ್ರಿ ವೇಳೆ ಜಿಲ್ಲೆಯ ಹಾಗೂ ಹುಬ್ಬಳ್ಳಿ-ಧಾರವಾಡ, ಹಾವೇರಿ ಸೇರಿದಂತೆ ಹೊರ ಜಿಲ್ಲೆಗಳಿಗೆ ಈ ಮದ್ಯವನ್ನ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ವಶಕ್ಕೆ ಪಡೆದ ಲಕ್ಷಾಂತರ ಮದ್ಯ ಯಾರಿಗೆ ಸೇರಿದ್ದು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ದಾಳಿಯಲ್ಲಿ ಅಬಕಾರಿ ಉಪಾಯುಕ್ತ ಶಿವನಗೌಡ ಪಾಟೀಲ್, ಅಬಕಾರಿ ಉಪ ಅಧೀಕ್ಷಕಿ ಸುರ್ವಣ. ಬಿ.ನಾಯ್ಕ ಮಾರ್ಗದರ್ಶನಲ್ಲಿ ಕಾರವಾರ ವಲಯ ನಿರೀಕ್ಷಕ ದಯಾನಂದ, ಜಿಲ್ಲಾ ಅಬಕಾರಿ ನಿರಿಕ್ಷಕ ತಂಡದ ಬಸವರಾಜ ಕರವಿನಕೊಪ್ಪ, ಸಿಬ್ಬಂದಿಗಳಾದ ರವಿ ನಾಯ್ಕ, ಶಿವಾನಂದ ಸೇರಿದಂತೆ ಮೊದಲಾದವರು ದಾಳಿ ನಡೆಸಿ ಲಕ್ಷಾಂತರ ಮದ್ಯ ವಶಕ್ಕೆ ಪಡೆದಿದ್ದಾರೆ.