ಆಟೋದಲ್ಲಿ ಗಾಂಜಾ- ನಾಲ್ವರ ಬಂಧನ: ವಶಪಡಿಸಿಕೊಂಡಿದ್ದು ಏನೇನು ಗೊತ್ತಾ..?
1 min read
ಧಾರವಾಡ: ರಾಮನಗರದ ವನಿತಾ ಸೇವಾ ಸಮಾಜದ ಹತ್ತಿರ ಆಟೋದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯನ್ನ ಆಧರಿಸಿ ದಾಳಿ ನಡೆಸಿದ ಹುಬ್ಬಳ್ಳಿ-ಧಾರವಾಡ ಘಟಕದ ಆಂತರಿಕ ಭದ್ರತಾ ವಿಭಾಗ ನಾಲ್ವರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನ ಹೊಸಯಲ್ಲಾಪುರ ನಿವಾಸಿ ನಿಹಾಲ ವಿಠ್ಠಲ ಲಾಂಡ, ಕಲಘಟಗಿ ತಾಲೂಕಿನ ಡೊಂಬರಿಕೊಪ್ಪ ಗ್ರಾಮದ ಸುಭಾಸ ಪಿರೋಜಿ, ಧಾರವಾಡ ತಪೋವನದ ಅಭಿಷೇಕ ಹಿರೇಮಠ ಹಾಗೂ ಧಾರವಾಡ ರಾಮನಗರದ ಡೆಂಟಲ್ ಟೆಕ್ನಾಲಜಿಸ್ಟ್ ಅಭಿಷೇಕ ಉಲ್ಲಾಳ ಎಂದು ಗುರುತಿಸಲಾಗಿದೆ.
ಬಂಧಿತರಿಂದ 400 ಗ್ರಾಂ ಗಾಂಜಾ, ವಿವಿಧ ಕಂಪನಿಯ ನಾಲ್ಕು ಮೊಬೈಲ್, ಆಟೋ ರಿಕ್ಷಾ ಕೂಡಿಕೊಂಡು ಒಟ್ಟು 2ಲಕ್ಷ 57500 ರೂಪಾಯಿ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ಸಪೆಕ್ಟರ್ ಶ್ರೀಶೈಲ ಬ್ಯಾಕೋಡ, ಎಎಸ್ಐ ಎ.ಎ.ಮಿರ್ಜಿ, ಸಿಬ್ಬಂದಿಗಳಾದ ಶ್ರೀನಿವಾಸ ಹೊಸಮನಿ, ವ್ಹಿ.ಬಿ.ಮಾಯಣ್ಣನವರ, ಜಯದೇವಗೌಡ ಪಾಟೀಲ, ಅರುಣ ಖಾನಾಪುರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧನ ಮಾಡಿದ್ದಾರೆ.