Posts Slider

Karnataka Voice

Latest Kannada News

ಕುಬೇರಪ್ಪ-ಸಂಕನೂರ-ಗುರಿಕಾರ: ಎಷ್ಟಾಗಿದೆ ಮತದಾನ- ಅಂಕಿ, ಸಂಖ್ಯೆಯೊಂದಿಗೆ ಮಾಹಿತಿ..

1 min read
Spread the love

ಧಾರವಾಡ: ವಿಧಾನಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲರೂ ಅಂದುಕೊಂಡಿದ್ದಕ್ಕಿಂತ ಹೆಚ್ಚಿಗೆ ಮತದಾನವಾಗಿದ್ದು, ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಯಾರನ್ನ ಮತದಾರ ಪ್ರಭು ಕೈ ಹಿಡಿದಿದ್ದಾನೆ ಎಂಬುದು ತಿಳಿಯಲು ಇನ್ನೂ ಆರು ದಿನ ಕಾಯಲೇಬೇಕು.

ಧಾರವಾಡ, ಗದಗ, ಹಾವೇರಿ ಮತ್ತು ಉತ್ತರಕನ್ನಡ ಜಿಲ್ಲೆ ವ್ಯಾಪ್ತಿಯ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಒಟ್ಟು 74278 ಮತದಾರರು ಇದ್ದರು. ಇಂದಿನ ಮತದಾನದಲ್ಲಿ ಒಟ್ಟು 52080 ಮತ ಚಲಾವಣೆಯಾಗಿದ್ದು, ಶೇಕಡಾ 70.11 ರಷ್ಟು ಮತದಾನವಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಮತದಾನ ಕಡಿಮೆಯಾಗಬಹುದೆಂದುಕೊಂಡಿದ್ದವರಿಗೆ ಇಂದಿನ ಮತದಾನ ಒಂದು ರೀತಿಯಲ್ಲಿ ಅಚ್ಚರಿ ಮೂಡಿಸಿದೆ. ಪದವೀಧರರು ಸಾಕಷ್ಟು ಜನರು ಹೊರಗೆ ಮತದಾನ ಮಾಡಿದ್ದು, ಉತ್ತಮ ವಿಚಾರವೇ ಆಗಿದೆ.

ಹಾವೇರಿ ಜಿಲ್ಲೆಯಲ್ಲಿಯೇ ಕಡಿಮೆ ಮತದಾನವಾಗಿದ್ದು, 23603ರ ಪೈಕಿ 16023 ಮತದಾನವಾಗಿದೆ. ಧಾರವಾಡ ಜಿಲ್ಲೆಯ 21549 ಮತಗಳ ಪೈಕಿ 14793 ಮತದಾನವಾಗಿದೆ. ಗದಗ ಜಿಲ್ಲೆಯಲ್ಲಿ 15978 ಮತಗಳ ಪೈಕಿ 11918 ಮತದಾನವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ 13148 ಮತಗಳ ಪೈಕಿ 9346 ಮತದಾನವಾಗಿದೆ.


Spread the love

Leave a Reply

Your email address will not be published. Required fields are marked *