ನಡುಬೀದಿಯಲ್ಲೇ ಪೊಲೀಸರಿಗೆ ಕಿಂಡಲ್: ಮತ್ತಿನಲ್ಲಿದ್ದವರಿಗೆ ಹುಬ್ಬಳ್ಳಿ ಪೊಲೀಸರು ಮಾಡಿದ್ದೇನು..?
1 min read
ಪರಶುರಾಮ ಮತ್ತು ಶ್ರೀನಿವಾಸ ಚೆನ್ನಾಪುರ ಕೂಡಿಕೊಂಡು ಲಾರಿ ಚಾಲಕನಿಗೆ ಧಮ್ ಕೊಡುತ್ತಿದ್ದಾಗ, ಪೊಲೀಸರ ಹೋಗಿದ್ದೇ ಈ ಗೊಂದಲಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ: ತುಮಕೂರಿನಲ್ಲಿ ಮಧ್ಯ ಸೇವಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ವೀಡಿಯೋ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಹುಬ್ಬಳ್ಳಿ ಪೊಲೀಸರು, ಮಧ್ಯ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಆಟಾಟೋಪ ಮಾಡುತ್ತಿದ್ದವರಿಬ್ಬರನ್ನ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋದ ಘಟನೆ ತಡರಾತ್ರಿ ನಡೆದಿದೆ.
ವೀಡಿಯೋ ಇಲ್ಲಿದೆ ನೋಡಿ..
ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಮೀಪದಲ್ಲಿ ಗಿರಣಿಚಾಳ ಪ್ರದೇಶದ ಸುತ್ತಮುತ್ತಲಿನ ಇಬ್ಬರು ನಸೆಯಲ್ಲಿ ಕಂಡ ಕಂಡವರಿಗೆ ಹೀಗೆಳೆಯುತ್ತಿದ್ದರು. ಇದನ್ನ ನೋಡಿ ಸಮಾಧಾನ ಮಾಡಲು ಹೋದ ಪೊಲೀಸರೋರ್ವರಿಗೆ ಕಿಂಡಲ್ ಮಾಡತೊಡಗಿದರು.
ತೀವ್ರವಾಗಿ ಗದ್ದಲ ಆರಂಭವಾಗುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಸಿಸಿಬಿ ಇನ್ಸಪೆಕ್ಟರ್ ಶ್ಯಾಮರಾವ ಸಜ್ಜನ, ಇಬ್ಬರನ್ನೂ ಎಳೆದುಕೊಂಡು ಜೀಪಿನಲ್ಲಿ ಹಾಕಿ ಠಾಣೆಗೆ ತೆಗೆದುಕೊಂಡು ಹೋದರು. ಆಗ, ಸ್ಥಳದಲ್ಲಿ ಗೊಂದಲ ಕಡಿಮೆಯಾಯಿತು.
ಕುಡಿದ ಅಮಲಿನಲ್ಲಿ ಏನೂ ಮಾಡಿದರೂ ನಡೆಯತ್ತೆ ಎನ್ನೋರಿಗೆ ಹುಬ್ಬಳ್ಳಿ ಪೊಲೀಸರು ಸರಿಯಾದ ರೀತಿಯನ್ನ ತೋರಿಸಿದ್ದಾರೆ. ರಾತ್ರಿಪೂರ್ತಿ ಠಾಣೆಯಲ್ಲಿಯೇ ಇದ್ದ ಅವರಿಗೆ ಪೊಲೀಸ್ ಕ್ರಿಯೆ ಗೊತ್ತಾಗಿರತ್ತೆ. ಹೇಗಿದ್ದರೂ ಇಂದಿನಿಂದ ನೈಟ್ ಕರ್ಪ್ಯೂ.. ಅಷ್ಟೇ..!