Posts Slider

Karnataka Voice

Latest Kannada News

ಕಣದಿಂದ ಹಿಂದೆ ಸರಿದವರಿಗೂ ಮತ ಹಾಕಿದ್ರು: ಗ್ರಾಪಂ ಇಲೆಕ್ಷನದಲ್ಲೂ ಇಷ್ಟೊಂದು ಮತಗಳು ಕುಲಗೆಡಲಾರವು..!

1 min read
Spread the love

ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಪದವೀಧರ ಮತದಾರರ ಬಗ್ಗೆ ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುವಂತೆ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಗ್ರಾಮ ಪಂಚಾಯತಿ ಚುನಾವಣೆಗಳಲ್ಲೂ ಇಷ್ಟೊಂದು ಮತಗಳು ಕುಲಗೆಡುವುದಿಲ್ಲ. ಆದರೆ, ಪದವೀಧರರೇ ತಪ್ಪು ಮಾಡಿದ್ದೇಕೆ ಎಂಬ ಪ್ರಶ್ನೆ ಮೂಡಿದೆ.

ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆ ವ್ಯಾಪ್ಯಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಒಟ್ಟು 52068 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಬರೋಬ್ಬರಿ 8772 ಮತಗಳು ಕುಲಗೆಟ್ಟಿದ್ದು, ದಾಖಲೆಯನ್ನೇ ಸೃಷ್ಟಿಸಿದೆ.

ಇಷ್ಟೇ ಅಲ್ಲ, ಜಾತ್ಯಾತೀತ ಜನತಾದಳ ಶಿವಶಂಕರ ಕಲ್ಲೂರು ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬೆಂಬಲ ನೀಡಿದ್ದರೂ ಅವರಿಗೂ 102 ಮತಗಳನ್ನ ಚಲಾವಣೆ ಮಾಡಿದ್ದಾರೆ. ಹಾಗಾದ್ರೇ, ಈ ಚುನಾವಣೆಯಲ್ಲಿ ಎಂತವರು ಮತ ಹಾಕಿದ್ದಾರೆಂಬ ಪ್ರಶ್ನೆ ಮೂಡಿದೆ.

ಸಾಮಾನ್ಯವಾಗಿ ಪದವೀಧರ ಕ್ಷೇತ್ರದ ಮತದಾರರು ಎಂದರೇ, ಸುಶಿಕ್ಷತರು ಅವರಿಗೆ ಹೆಚ್ಚು ಹೇಳುವುದರಲ್ಲಿ ಅರ್ಥವಿಲ್ಲ ಎಂಬ ಭಾವನೆ ಇರೋದು ಸಹಜ. ಆದರೆ, ಮತ ಎಣಿಕೆಯ ನಂತರ ಕುಲಗೆಟ್ಟ ಮತಗಳನ್ನ ನೋಡಿದಾಗ, ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಪಡೆದ ಮತಗಿಂತ ಹೆಚ್ಚಾಗಿವೆ.

ಇಂತಹ ಕಾರ್ಯಕ್ಕೆ ಉದ್ದೇಶಪೂರ್ವಕವಾಗಿ ಮಾಡಲಾಗತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಮ್ಮ ಪಕ್ಷ ಮತಗಳು ಬೀಳಲಾರವು ಎಂಬುದು ನಿಖರವಾದ ಪ್ರದೇಶದಲ್ಲಿ ಮತದಾರರಿಗೆ ಬೇಕೆಂದೇ ದಾರಿ ತಪ್ಪಿಸುವ ಪ್ರಯತ್ನವೂ ನಡೆಯತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೂ.. ಪದವೀಧರರು ಎಡೆವಿದ್ದೇಲ್ಲಿ..


Spread the love

Leave a Reply

Your email address will not be published. Required fields are marked *